ರಾಷ್ಟ್ರಮಟ್ಟದ ಸ್ಕೇಟಿಂಗ್: ಸಿಮ್ಮಿತ್‌ಗೆ ಚಿನ್ನದ ಪದಕ

ಮಂಗಳೂರು, ಜ. 23: 2016ರ ಜನವರಿ 16ರಿಂದ 20ರ ವರೆಗೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದ ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ 53ನೆ ರಾಷ್ಟ್ರಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಸೀಲಿಯಾ ಸಿಮ್ಮಿತ್ ಅವರು 300 ಮೀ. ಟೈಮ್ ಟ್ರಯಲ್ ಸ್ಪ್ರಿಂಟ್ ರೇಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ.
ಪಾಂಡೇಶ್ವರದ ನಿವಾಸಿ ಅಸ್ಮಾ ಮುಹಮ್ಮದ್ ಹಾಗೂ ಪಿ.ಎ.ಮುಹಮ್ಮದ್ ಕಾಟಿಪಳ್ಳ ದಂಪತಿ ಪುತ್ರಿಯಾಗಿರುವ ಸೀಲಿಯಾ ಸಿಮ್ಮಿತ್ ಬೆಂಗಳೂರಿನ ಕೆಐಎಂಎಸ್ ಮೆಡಿಕಲ್ ಕಾಲೇಜಿನ ಪ್ರಥಮ ದರ್ಜೆ ವಿದ್ಯಾರ್ಥಿನಿಯಾಗಿದ್ದಾರೆ. ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯೆಯಾಗಿರುವ ಅವರು, ತರಬೇತುದಾರ ರಾಷ್ಟ್ರ ಪ್ರಶಸ್ತಿ ವಿಜೇತ ಮಹೇಶ್ ಕುಮಾರ್ ಅವರಿಂದ ತರಬೇತಿಯನ್ನು ಪಡೆದಿದ್ದಾರೆ.
Next Story





