‘ಸರ್ಚ್ ಬಾರ್’ ಹೊಂದಲು ಆ್ಯಪಲ್ಗೆ ಗೂಗಲ್ನಿಂದ 100 ಕೋಟಿ ಡಾಲರ್
ಆ್ಯಪಲ್ ಉಪಕರಣಗಳಲ್ಲಿ ಇನ್ನು 3ಡಿ ಫೇಸ್‌ಬುಕ್
ನ್ಯೂಯಾರ್ಕ್, ಜ. 23: ನೀವು ‘ಆ್ಯಪಲ್’ ಉಪಕರಣಗಳ ಬಳಕೆದಾರರಾಗಿದ್ದರೆ, ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ಶೀಘ್ರದಲ್ಲೇ 3ಡಿ ಆಯಾಮದಲ್ಲಿ ನೋಡಬಹುದು. ಫೇಸ್‌ಬುಕ್ ‘‘3ಡಿ ಟಚ್’’ ಎಂಬ ವಿಶೇಷ ಅಂಶವನ್ನು ತನ್ನ ಟೈಮ್‌ಲೈನ್‌ಗೆ ಸೇರ್ಪಡೆಗೊಳಿಸುತ್ತಿದೆ.
ಇನ್ನು ಮುಂದೆ, ಪರದೆಯನ್ನು ತಟ್ಟಿ ಎಳೆಯುವ ಬದಲು, ಪೋಸ್ಟ್‌ನಲ್ಲಿರುವ ವಿಷಯವನ್ನು ನೋಡಿ, ಬೇಕಾದ ರೀತಿಯಲ್ಲಿ ವ್ಯವಹರಿಸಲು ‘3ಡಿ ಟಚ್’ ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು ‘ಟೆಕ್ ಕ್ರಂಚ್’ ವರದಿ ಮಾಡಿದೆ.
ವೆಬ್ ಲಿಂಕ್‌ಗಳು, ಪ್ರೊಫೈಲ್‌ಗಳು, ಫೇಸ್‌ಬುಕ್ ಪೇಜ್‌ಗಳು, ಫೇಸ್‌ಬುಕ್ ಗ್ರೂಪ್‌ಗಳು, ಫೇಸ್‌ಬುಕ್ ಈವೆಂಟ್‌ಗಳು, ಚಿತ್ರಗಳು, ಪ್ರೊಫೈಲ್ ಚಿತ್ರಗಳು ಮತ್ತು ಕವರ್ ಫೋಟೊಗಳ ಜೊತೆಗೆ ಈ ಅಂಶ ಕೆಲಸ ಮಾಡುತ್ತದೆ.
ಇದರ ಪ್ರಮುಖ ಉಪಯೋಗವೆಂದರೆ, ಆ್ಯಪಲ್ ಬಳಕೆದಾರರಿಗೆ ಅವರು ಯಾವ ಆ್ಯಪ್‌ನಲ್ಲಿದ್ದರೂ, ಅದರಿಂದ ಹೊರಬರದೆ ಲಿಂಕ್‌ಗಳು ಮತ್ತು ಪ್ರೊಫೈಲ್‌ಗಳಿಗೆ ಹೋಗಿ ಸಂದೇಶವನ್ನು ಓದಬಹುದಾಗಿದೆ.
Next Story





