‘ಟ್ರಾನ್ಸಿಟ್ ಒನ್’ನಲ್ಲಿ ಹೂಡಿಕೆಗೆ ಅವಕಾಶ

ಮಂಗಳೂರು,ಜ.23:ತೊಕ್ಕೊಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ‘ಟ್ರಾನ್ಸಿಟ್ ಒನ್’ ಹಲವು ಸೌಕರ್ಯಗಳು ಒಂದೇ ಕಡೆ ದೊರೆಯುವ ಮಿನಿ ಮಾಲ್ ಆಗಿದ್ದು, ರಿಯಲ್ ಎಸ್ಟೇಟ್ ಮಾರ್ಕೆಟ್‌ನಲ್ಲಿ ವಿನೂತನ ಮಾದರಿ ಕಟ್ಟಡ ವಿನ್ಯಾಸದ ಮೂಲಕ ಖ್ಯಾತರಾದ ಇಕೋಲಾಜಿಕ್ ಹ್ಯಾಬಿಟ್ಯಾಟ್ ಈ ಯೋಜನೆಯ ಪ್ರವರ್ತಕರಾಗಿದ್ದಾರೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇಕೋಲಾಜಿಕ್ ಹ್ಯಾಬಿಟ್ಯಾಟ್ ಕಮರ್ಶಿಯಲ್ ಮತ್ತು ಲಿವಿಂಗ್ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಾ ಬಂದಿರುವುದು ಇದರ ಹೆಗ್ಗಳಿಕೆಯಾಗಿದೆ. ಟ್ರಾನ್ಸಿಟ್ ಮಾಲ್ ಪಟ್ಟಣದಿಂದ ದೂರ ಇರುವ ಪ್ರದೇಶದಲ್ಲಿ ಜನರಿಗೆ ಮನೋರಂಜನೆ, ಶಾಪಿಂಗ್‌ಮಾಲ್ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ನಿರ್ಮಿಸಿಕೊಡುವ ವಾತಾವರಣವನ್ನು ನಿರ್ಮಿಸಲಿದೆ.
ವೇಗವಾಗಿ ಬೆಳೆಯುತ್ತಿರುವ ತೊಕ್ಕೊಟ್ಟು ಪರಿಸರದಲ್ಲಿ ಅಗತ್ಯವಾದ ಸಾಮಾಜಿಕ ಮೂಲ ಸೌಕರ್ಯಗಳು ಶಾಪಿಂಗ್ ಮಾಲ್, ರಿಕ್ರಿಯೇಶನ್ ಹಾಗೂ ಇತರ ಸಮುದಾಯದ ಬೇಡಿಕೆಗಳು ಹೆಚ್ಚಿರುವ ಹಾಗೂ ಜನಸಂಚಾರ ವೃದ್ಧಿಸುತ್ತಿರುವ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಪ್ರವರ್ತಕರು ಈ ಪ್ರದೇಶದಲ್ಲಿ ಟ್ರಾನ್ಸಿಟ್ ಒನ್ ಮಾಲ್ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.್ರಾನ್ಸಿಟ್ ಒನ್ ಈ ಯೋಜನೆಯಲ್ಲಿ ಸಣ್ಣ ಬೂಟಿಕ್ ಸ್ಟೋರ್‌ನಿಂದ ಹೈಪರ್ ಮಾರ್ಕೆಟ್‌ವರೆಗೆ ಹೂಡಿಕೆ ಮಾಡಲು ಗ್ರಾಹಕರಿಗೆ ವ್ಯಾಪಕ ಆಯ್ಕೆಯನ್ನು ನೀಡಿದೆ. ಲೆವೆಲ್ 2 ಮತ್ತು 3 ಲೀಡಿಂಗ್ ಫ್ಯಾಶನ್ ಬ್ರಾಂಡ್‌ಗಳಿಗೆ ವಿನ್ಯಾಸವಾಗಿರುವುದರಿಂದ ಹೂಡಿಕೆದಾರರ ಗಮನ ಸೆಳೆದು ಮಾರಾಟದಲ್ಲೂ ಉತ್ತಮ ಸಾಧನೆ ಮಾಡಿದೆ. ಈ ಮಾಲ್‌ನಲ್ಲಿ ಮಾರಾಟ ಮಳಿಗೆಗಳನ್ನು ಗ್ರಾಹಕರು 16 ಲಕ್ಷ ರೂ.ಮೊತ್ತದಲ್ಲಿ ಖರೀದಿಸಬಹುದಾಗಿದೆ. ಬೂಟಿಕ್ ಸ್ಟೋರ್‌ಗಳು ಮಾಲ್‌ನ ಅನಾವರಣದ ಮೊದಲ ಮಾರಾಟವಾಗಿದೆ. ಇಕೋಲಾಜಿಕ್ ಹ್ಯಾಬಿಟ್ಯಾಟ್ ಹೊಸ ಶೈಲಿಯ, ಸ್ಪಾಟ್‌ಆಫ್ ವ್ಯವಹಾರಕ್ಕೆ ಟ್ರಾನ್ಸಿಟ್ ಒನ್‌ನಲ್ಲಿ ಶಾಪ್ ಆರಂಭಿಸಲು ಹೆಚ್ಚಿನ ವಿವರಗಳಿಗಾಗಿ ಇಕೋಲಾಜಿಕ್ ಹ್ಯಾಬಿಟಾಟ್, ಕ್ರೈಸ್ಟಲ್ ಆರ್ಕ,3ನೆ ಮಹಡಿ ಬಲ್ಮಠ ರಸ್ತೆ ಹಂಪನಕಟ್ಟೆ ಮಂಗಳೂರು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.





