ಮಂಗಳೂರು : ಆಟೊ ರಿಕ್ಷಾ ಢಿಕ್ಕಿ: ವೃದ್ಧೆ ಮೃತ್ಯು
ಮಂಗಳೂರು, ಜ. 23: ಆಟೊ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವೃದ್ಧೆಯೋರ್ವರು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಕುಳಾಯಿ ಹೊನ್ನಕಟ್ಟೆ ಸಮೀಪ ನಡೆದಿದೆ.ಮೃತರನ್ನು ಕುಳಾಯಿ ಹೊನ್ನಕಟ್ಟೆ ಬಳಿಯ ನಿವಾಸಿ ಜಯಲಕ್ಷ್ಮಿ (65) ಎಂದು ಗುರುತಿಸಲಾಗಿದೆ.ಜಯಲಕ್ಷ್ಮೀ ಇಂದು ಬೆಳಗ್ಗೆ ಸುಮಾರು 6:30ರ ಹೊತ್ತಿಗೆ ಹೊನ್ನಕಟ್ಟೆ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆಯನ್ನು ಕಾಟುತ್ತಿದ್ದಾಗ ಬೈಕಂಪಾಡಿ ಕಡೆಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ಆಟೊ ರಿಕ್ಷಾವೊಂದು ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಜಯಲಕ್ಷ್ಮೀ ಅವರ ಮುಖ, ಎಡಕೈ ಹಾಗೂ ತಲೆಯ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಅವರನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಆಟೊ ರಿಕ್ಷಾ ಚಾಲಕ ವಿಜಯ ಶ್ರೀಯಾನ್ ಎಂಬವರ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ.ಜಲಲಕ್ಷ್ಮೀ ಎಂಬವರ ಪುತ್ರಿ ನೀಡಿದ ದೂರಿನಂತೆ ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





