ಇಂದು ‘ಮಂಗಳೂರು ಜ್ಯುವೆಲ್ಲರ್ಸ್’ನ ಸ್ಥಳಾಂತರಿತ ಮಳಿಗೆ ಉದ್ಘಾಟನೆ
ಮಂಗಳೂರು, ಜ.23: ಕಳೆದ ಮೂರು ದಶಕಗಳಿಂದ ಗ್ರಾಹಕರ ಸಂತೃಪ್ತ ಸೇವೆಯಲ್ಲಿ ತೊಡಗಿಸಿಕೊಂಡಿರುವ ‘ಮಂಗಳೂರು ಜ್ಯುವೆಲ್ಲರ್ಸ್’ನ ಮಳಿಗೆಯು ನಗರದ ಹಂಪನಕಟ್ಟೆ-ಬಲ್ಮಠ ರಸ್ತೆಯ ಮಾಂಡೋವಿ ಮೋಟರ್ಸ್ ಎದುರುಗಡೆಯಲ್ಲಿರುವ ‘ಮಂಗಳಾ ಟವರ್ಸ್’ಗೆ ಸ್ಥಳಾಂತರಿತಗೊಂಡಿದ್ದು, ಇದರ ಉದ್ಘಾಟನೆಯು ಜ.24ರಂದು ನಡೆಯಲಿದೆ.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಉದ್ಘಾಟಿಸಲಿದ್ದು, ಮೈನಾ ಸದಾನಂದ ಶೆಟ್ಟಿ ದೀಪ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯೆ ಝಹುರಾ ಅಬ್ಬಾಸ್ ಭಾಗವಹಿಸಲಿದ್ದಾರೆ. ದ್ಘಾಟನೆಯ ಪ್ರಯುಕ್ತ ಜ.24ರಿಂದ 31ರವರೆಗೆ 8 ಗ್ರಾಂ ಚಿನ್ನದ ಖರೀದಿಗೆ 1 ಚಿನ್ನದ ನಾಣ್ಯ ಉಚಿತವಾಗಿ ನೀಡಲಾಗುವುದು. ಚಿನ್ನಾಭರಣಗಳ ಅದೃಷ್ಟ ಬಹುಮಾನ ಯೋಜನೆಯ ಸದಸ್ಯರಾಗುವ ಅವಕಾಶವಿದೆ. ಬೆಳ್ಳಿಯ ಫ್ಯಾನಸಿ ಜ್ಯುವೆಲ್ಲರ್ಸ್ ಮತ್ತು ಗಿಫ್ಟ್ ಆರ್ಟಿಕಲ್ಸ್ ಇಲ್ಲಿ ಲಭ್ಯವಿದೆ ಎಂದು ಪಾರಂಪರಿಕ ಆಭರಣಗಳ ತಯಾರಕ ಮತ್ತು ವ್ಯಾಪಾರಿ ಸಂಸ್ಥೆಯಾದ ‘ಮಂಗಳೂರು ಜ್ಯುವೆಲ್ಲರ್ಸ್’ನ ಕೆ.ಕೇಶವ ಆಚಾರ್ಯ ಮತ್ತು ಕೆ. ಶರತ್ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





