ಪೆನಾಂಗ್, ಜ.23:
ಪೆನಾಂಗ್, ಜ.23: ಭಾರತದ ಖ್ಯಾತ ಯುವ ಬ್ಯಾಡ್ಮಿಟನ್ ತಾರೆ ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಮಲೇಷ್ಯನ್ ಮಾಸ್ಟರ್ ಗ್ರಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ಅವರು ಕೊರಿಯಾದ ಜಿ ಹ್ಯೂನ್ ಸುಂಗ್ ವಿರುದ್ಧ 21-19, 12-21, 21-10 ಅಂತರದಿಂದ ಜಯ ಗಳಿಸಿ ಪ್ರಶಸ್ತಿ ಸುತ್ತು ತಲುಪಿದರು.
ಒಂದು ಗಂಟೆ 9 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಸಿಂಧು ಅವರು ಮೊದಲ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಿದ್ದರು. ಆದರೆ ಬಳಿಕ ಎರಡನೆ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರು. ಮೂರನೆ ಸೆಟ್‌ನಲ್ಲಿ ತಿರುಗೇಟು ನೀಡಿದ ಸಿಂಧು ಗೆಲುವಿನ ನಗೆ ಬೀರಿದರು.
ಐದನೆ ಗ್ರಾನ್ ಪ್ರಿ ಗೋಲ್ಡ್ ಇವೆಂಟ್‌ನಲ್ಲಿ ಪಾಲ್ಗೋಳ್ಳುತ್ತಿರುವ ಸಿಂಧು ಅವರು 2013ರಲ್ಲಿ ಮಲೇಷ್ಯನ್ ಓಪನ್ ಪ್ರಶಸ್ತಿ ಜಯಿಸಿದ್ದರು.
2013, 2014 ಮತ್ತು 2015ರಲಲಿ ಮಕಾವ್ ಓಪನ್ ಕಿರೀಟ ಧರಿಸಿದ್ದ ಸಿಂಧು ಐದನೆ ಪ್ರಶಸ್ಸಿ ಗೆಲ್ಲುವ ಕಡೆಗೆ ನೋಡುತ್ತಿದ್ದಾರೆ.
ಶ್ರೀಕಾಂತ್‌ಗೆ ಸೋಲು:ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕೆ. ಶ್ರೀಕಾಂತ್ ಸೋಲು ಅನುಭವಿಸಿ ಕೂಟದಿಂದ ಹೊರ ನಡೆದಿದ್ದಾರೆ.
ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಅವರು ಸ್ಥಳೀಯ ಹುಡುಗ ಝುಲ್ಕರ್‌ನೈನ್ ಝೈನುದ್ದೀನ್‌ಗೆ ಶರಣಾದರು.





