ಬ್ರಿಟನ್‌ಗೆ ಹೋಗಲು ನಿರಾಶ್ರಿತರಿಂದ ನೂಕು ನುಗ್ಗಲು
ಫ್ರಾನ್ಸ್: ಬ್ರಿಟನ್‌ಗೆ ವಲಸೆಹೋಗುವ ನಿರೀಕ್ಷೆಯಲ್ಲಿ ಬೋಟ್‌ನ್ನೇರಲು ನಿರಾಶ್ರಿತರಿಂದ ನೂಕುಗ್ಗಲುಂಟಾದ ಪರಿಣಾಮ ಕಲೈಸ್ ಬಂದರಿನಲ್ಲಿ ಘರ್ಷಣೆ ಏರ್ಪಟ್ಟಿತು. ಪರಿಸ್ಥಿ ವಿಪಕೊಪಕ್ಕೆ ಹೊಗದಂತೆ ತಡೆಯಲಿಕ್ಕಾಗಿ ಫ್ರೆಂಚ್ ಅಧಿಕಾರಿಗಳು ಬಂದರನ್ನು ಮುಚ್ಚಿದರು.
ತೀರ ದಯಾನೀಯ ಸ್ಥಿತಿಯಲ್ಲಿ ದಕ್ಷಿಣ ಕಲೈಸ್‌ನಲ್ಲಿ ಉಳಿದುಕೊಂಡಿರುವ ನಿರಾಶ್ರಿತರನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಫ್ರೆಂಚ್ ಎಡ ಪಕ್ಷ ಸಂಘಟನೆ ನಡೆಸಿದ ಪ್ರತಿಭಟನೆಯು ಘಟನೆಗೆ ಕಾರಣವಾಗಿದೆ. ಬ್ರಿಟನ್‌ಗೆ ಹೋಗಬಹುದೆಂದು ಬಹಳ ನಿರೀಕ್ಷೆಯಿಂದ ಬಂದಿದ್ದ ನಾಲ್ಕು ಸಾವಿರದಷ್ಟು ಕಲೈಸ್‌ನಲ್ಲಿ ಸಿಲುಕಿಕೊಂಡಿದ್ದಾರೆ
ಪ್ರತಿಭಟನಾಕಾರರು ನಿರಾಶ್ರಿತರನ್ನು ಸೇರಿಸಿಕೊಂಡು ಬಂದರಿಗೆ ಬಂದಿದ್ದರು. ಎಷ್ಟೇ ತಡೆದರು ಸುಮಾರು ನೂರಾರು ಮಂದಿಗೆ ಬಾರಿಕೇಡ್‌ನ ಹತ್ತಿರಕ್ಕೆ ಹೋಗಲು ಸಾಧ್ಯವಾಗಿತ್ತು. ಇವರಲ್ಲಿ 50 ಮಂದಿ ಬ್ಯಾರಿಕೇಡ್‌ನ್ನು ದಾಡಿ ಸ್ಪಿರಿಟ್ ಆಫ್ ಬ್ರಿಟನ್ ಎಂಬ ಫೆರಿ ಬೋಟಿಗೆ ಹತ್ತಿ ಕುಳಿತರು. ಆದ್ದರಿಂದ ಕಲೈಸ್ ಮೇಯರ್ ನತಾಶ್ ಬೌಚಾರ್ಟ್ ಕಲೈಸ್ ಬಂದರನ್ನು ಮುಚ್ಚಲು ಆದೇಶಿಸಿದರು.
ಪ್ರತಿಭಟನಾನಿರತರನ್ನು ಮತ್ತು ನಿರಾಶ್ರಿತರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ಚದುರಿಸಿದರು. ಬೋಟ್‌ಗೆ ಹತ್ತಿಸಬೇಕಾದ ಕೆಲವಾರು ಟ್ರಕ್‌ಗಳು ಕಲೈಸ್‌ನಲ್ಲಿ ಘಟನೆಯಿಂದಾಗಿ ಸಿಕ್ಕಿಹಾಕಿಕೊಂಡಿತ್ತು.
ಕೃಪೆ: ಮರು ನಾಡನ್ ಮಲೆಯಾಳಿ







