ಮಸ್ಕತ್‌ಃ ಪೂರ್ವ ಅರಬಿಯದಲ್ಲಿ ಕಲ್ಲಿನ ಯುಗದ ಜನವಾಸ ಸ್ಥಳ ಪತ್ತೆ
ಮಸ್ಕತ್‌ಃಒಮನ್‌ನ ಚರಿತ್ರೆಗೆ ಹೆಚ್ಚಿನ ಬೆಳಕು ಚೆಲ್ಲುವ ಕಬ್ಬಿಣ ಯುಗದ ಜನವಾಸ ಕೇಂದ್ರಗಳನು ಇಟಲಿಯನ್ ಉತ್ಕನನ ತಂಡ ಪತ್ತೆ ಹಚ್ಚಿದೆ. ಕಲ್ಲಿನ ಯುಗದಲ್ಲಿ ಪೂರ್ವದ ಅರಬಿಯದಲ್ಲಿ ತುಂಬ ಸಕ್ರಿಯವಾಗಿದ್ದ ಜನರು ವಾಸವಿರುತ್ತಿದ್ದ ಸ್ಥಳ ಇದಾಗಿದೆ ಎಂದು ಅಂದಾಜಿಸಲಾಗಿದೆ.
650-300 ಬಿ,ಸಿಯಲ್ಲಿ ಅರಬಿದ ಇತರಭಾಗಲ್ಲಿದ್ದ ಗೋತ್ರಗಳು ಇಲ್ಲಿ ವಲಸೆ ಬಂದು ವಾಸಿಸಿದ್ದುದರ ಸಾಕ್ಷ್ಯಗಳು ದೊರೆತಿವೆ. ದಾಖಿಲಿಯಾ ಗವರ್ನರೇಟ್‌ನ ಬುಹ್ಲಿಯದಲ್ಲಿ ಪತ್ತೆಯಾದ ಪ್ರಾಚೀನ ಕೇಂದ್ರಕ್ಕೆ ಸಲೂತ್ ಪರಂಪರಾಗತ ಗ್ರಾಮ ಎಂದು ಶಂಸೋಧಕರು ಹೆಸರಿಸಿದ್ದಾರೆ.
ಪಿಸ ವಿಶ್ವವಿದ್ಯಾಲಯದ ತಂಡ ಒಮನ್ ಸುಲ್ತಾನರ ಸಾಂಸ್ಕೃತಿಕ ಕಾರ್ಯ ಸಲಹೆಗಾರರ ಮೇಲ್ನೋಟದಲ್ಲಿ ಒಮನ್‌ನನಲ್ಲಿ ಉತ್ಖನನ ಕಾರ್ಯ ನಡೆಸುತ್ತಿದೆ. ಒಮನ್‌ನಲ್ಲಿ ಕಬ್ಬಿಣ ಯುಗದಿಂದಲೇಸುಸಜ್ಜಿತ ನೀರಾವರಿ ವ್ಯವಸ್ಥೆ ಇತ್ತೆಂಬುದು ಸಲೂತ್‌ನ ಉತ್ಖನನದಿಂದ ತಿಳಿದುಕೊಳ್ಳಲಾಗಿದೆ.
ಇತಿಹಾಸ ಸಂಶೋಧಕರು ಮತು ಪ್ರವಾಸಿಗಳಿಗೆ ಸಲೂತ್‌ನ ಈ ಕಲ್ಲಿನ ಯುಗದ ಪಳೆಯುಳಿಕೆಯನ್ನು ತೆರೆದು ಕೊಡಲು ಅಲ್ಲಿನ ಸರಕಾರ ಯೋಚಿಸುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲ್ಲಿನಿಂದ ಮಾಡಲಾದ ಮನೆ ಬಳಕೆ ಉಪಕರಣಗಳು. ಕಾಗದಗಳು, ಕಲ್ಲಿನ ಯುಗದಲ್ಲಿ ಬಳಸುತ್ತಿದ್ದ ಮುದ್ರೆಗಳು ಇಲ್ಲಿ ಸಿಕ್ಕಿದೆ. ಗ್ರಾಮದ ಸುತ್ತಲೂ ಕೋಟೆಯಂತಿರುವ ರಚನೆಯೂ ಇದೆ, ಮಣ್ಣುಪಾಲಾದ ಕಲ್ಲಿನ ಗೋಡೆಗಳನ್ನೂ ತಂಡ ಪತ್ತೆಹಚ್ಚಿದೆ
ಗಲ್ಪ್ ಮಾಧ್ಯವ







