ಜೆಪ್ಪು: ವಿಶ್ವ ಮಾನವ ಹಕ್ಕುಗಳ ದಿನಾಚರಣೆ

ಮಂಗಳೂರು: ಸಂತ ಜೊಸೆಫ್ ಕಾಲೇಜು ಜೆಪ್ಪು ಇಲ್ಲಿ ಕಾಲೇಜಿನ " ಮಾನವ ಹಕ್ಕುಗಳ ಸಂಘದ" ವತಿಯಿಂದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಜ.20ರಂದು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಶ್ರೀಯುತ ಗಣೇಶ್ ಹಾಗೂ ಮಂಗಳೂರಿನ ವಕೀಲರ ಸಂಘದ ಅಧ್ಯಕ್ಷರು ಶ್ರೀಯುತ ಚೆಂಗಪ್ಪರವರು ಹಾಗೂ ಟ್ರಾಫಿಕ್ ಇನ್ಸಪೆಕ್ಟರ್ ಸುರೇಶ್‌ಕುಮಾರ್ ಆಗಮಿಸಿ ವಿದ್ಯಾರ್ಥಿಗಳಿಗೆ ಕಾನೂನಿನ ಹಾಗೂ ಮಾನವಹಕ್ಕುಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ರೆ ಫಾ ವಿಲ್ಫ್ರಡ್ ಪ್ರಕಾಶ್ ಡಿ’ಸೋಜ, ಉಪನ್ಯಾಸಕಿ ಕು ದುರ್ಗಾ ಹಾಗೂ ಕು ಲವೀನಾ, ವಿದ್ಯಾರ್ಥಿ ಅಧ್ಯಕ್ಷೆ ದಿವ್ಯ ಆಚಾರ್ಯ ಉಪಸ್ಧಿತರಿದ್ದರು.
Next Story





