ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆ
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಮಹಾತ್ಮಾ ಗಾಂಧಿ ಹತ್ಯೆಯಾದ ಜ. 30, 2016 ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿರುವ ‘ಸಹಬಾಳ್ವೆ ಸಾಗರ’ ರಾಷ್ಟ್ರೀಯ ಸಮಾವೇಶದ ಆಹ್ವಾನ ಪತ್ರಿಕೆ ಮತ್ತು ಪೋಸ್ಟರ್ ಬಿಡುಗಡೆ ಸಮಾರಂಭವು ಜನವರಿ 25, 2016, ಸೋಮವಾರದಂದು ಮಂಗಳೂರಿನಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಂಜೆ 4 ಗಂಟೆಗೆ ವಿಶ್ರಾಂತ ಪ್ರಾಂಶುಪಾಲೆ, ಲೇಖಕಿ ಚಂದ್ರಕಲಾ ನಂದಾವರ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ಸದರಿ ಕಾರ್ಯಕ್ರಮಕ್ಕೆ ತಾವು ತಮ್ಮ ಪತ್ರಿಕೆ/ವಾಹಿನಿಯ ಮೂಲಕ ವ್ಯಾಪಕ ಪ್ರಚಾರ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.
ಗುಲಾಬಿ ಬಿಳಿಮಲೆ
ಪ್ರಚಾರ ಸಮಿತಿಯ ಪರವಾಗಿ
99726 73244
Next Story





