ಮೀನುಗಾರಿಕಾ ಬೊಟುಗಳ ಅಕ್ರಮಸಕ್ರಮ ಶೀಘ್ರ ನಿರ್ಧಾರ:ಅಭಯಚಂದ್ರ ಜೈನ್

ಮಂಗಳೂರು, ಜ.24: 100 ಮೀನುಗಾರಿಕಾ ಬೋಟುಗಳ ಅಕ್ರಮ ಸಕ್ರಮ ಮಾಡಲು ರಾಜ್ಯ ಸರಕಾರ ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಪ್ರಕ್ರೀಯೆ ನಡೆಯುತ್ತಿದೆ ಎಂದು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ನಿರ್ದೇಶನದಂತೆ ಸುಮಾರು 500 ಬೋಟುಗಳು ಲೈಸೆನ್ಸ್ ಪಡೆದಿದ್ದು ಲೈಸೆನ್ಸ್ ಪಡೆದುಕೊಳ್ಳದ ಸುಮಾರು 100 ಬೋಟುಗಳಿಗೆ ಲೈಸೆನ್ಸ್ ನಿಡುವ ಮೂಲಕ ಅದನ್ನು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ. ಸಕ್ರಮವಾಗಿರುವ ಪ್ರತಿ ಬೋಟಿಗೆ 7 ಲಕ್ಷ ರೂ ಡಿಸೇಲ್ ಸಬ್ಸಿಡಿ ನೀಡುವುದರಿಂದ ಸಕ್ರಮಗೊಳಿಸುವ ಬೋಟುಗಳ ಹೆಚ್ಚುವರಿ ಸಬ್ಸಿಡಿಯನ್ನು ಸುಮಾರು 7 ಕೊಟಿಯನ್ನು ರಾಜ್ಯ ಸರಕಾರ ನೀಡಲಿದೆ . ಈ ನಿಟ್ಟಿನಲ್ಲಿ ಮುಂದಿನ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
25 ವರ್ಷ ಹಳೆಯ ಮರದ ಬೋಟುಗಳನ್ನು ಇಲಾಖೆಗೆ ಒಪ್ಪಿಸಿ ಮೀನುಗಾರರು ಸ್ಟೀಲ್ ಬೋಟ್ ಖರೀದಿ ಮಾಡಿದರೆ ಅವರಿಗೆ ಹೊಸದಾಗಿ ಲೈಸೆನ್ಸ್ ನೀಡಲಾಗುವುದು. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ 16 ಅರ್ಜಿಗಳು ಇಲಾಖೆಗೆ ಬಂದಿದೆ ಎಂದು ತಿಳಿಸಿದರು.





