ಓಮನ್ : ಇಂಡಿಯನ್ ಪ್ರವಾಸಿ ಫೋರಮ್ ಸಲಾಲ - ಓಮನ್ ವತಿಯಿಂದ "ಫನ್ ಟೈಮ್ ಸ್ಪೋರ್ಟ್ಸ್ ಮೀಟ್":

ಇಂಡಿಯನ್ ಪ್ರವಾಸಿ ಫೋರಮ್ ಸಲಾಲ - ಓಮನ್ ವತಿಯಿಂದ ಭಾರತೀಯ ಕುಟುಂಬಗಳ ಸಮ್ಮಿಲನ "ಫನ್ ಟೈಮ್ ಸ್ಪೋರ್ಟ್ಸ್ ಮೀಟ್" ಅಸ್ಸಾಧ ಪಬ್ಲಿಕ್ ಪಾರ್ಕ್ ನಲ್ಲಿ 22.01.2016 ಶುಕ್ರವಾರ ನಡೆಯಿತು. ಕಾರ್ಯಕ್ರಮದ ನಿರ್ದೇಶಕ ಶಮೀರ್ ಪುತ್ತೂರು ಅವರ ಪ್ರಸ್ತಾವನೆಯೊಂದಿಗೆ ಕ್ರೀಡಾಕೂಟ ಆರಂಭಗೊಂಡಿತು. ನಂತರ ನಡೆದ ಮಕ್ಕಳಕ್ರೀಡಾಕೂಟದಲ್ಲಿ ಹಲವಾರು ವಿಭಾಗಗಳ 80 ಕ್ಕೂ ಮಿಕ್ಕಿ ಮಕ್ಕಳು ಪಾಲ್ಗೊಂಡರು. ಭಾರತೀಯ ಹಳ್ಳಿಗಾಡಿನ ವಿಸಿಷ್ಟ ಆಟಗಳನ್ನು ನೆನಪಿಸುವಂತಹ 25 ಕ್ಕೂ ಮಿಕ್ಕಿದ ಕ್ರೀಡೆಗಳು ಮಕ್ಕಳ ಮನಸೂರೆಗೊಲ್ಲುವಲ್ಲಿ ಯಶಸ್ವಿಯಾಯಿತು. ನಂತರ ನಡೆದ ಗಂಡಸರ ಕ್ರೀಡಾಕೂಟವು ತಮ್ಮ ಬಾಲ್ಯದ ನೆನಪಿನಲ್ಲಿ ತೇಲಿಸಿದ ಅನುಭವವನ್ನು ನೀಡುವಲ್ಲಿ ಯಸಸ್ವಿಯಾಯಿತು. ಮಹಿಳೆಯರಿಗೆ ಮಹಿಳೆಯರಿಂದಲೇ ಪ್ರತ್ಯೇಕವಾಗಿ ನಡೆಸಲಾದ ಕಾರ್ಯಕ್ರಮದಲ್ಲಿ 50 ಕ್ಕೂ ಅದಿಕ ಮಹಿಳೆಯರು ಪಾಲ್ಗೊಂಡರು. ಇಂಡಿಯನ್ ಪ್ರವಾಸಿ ಫೋರಮ್ ಸಲಾಲ ಇದರ ಅಧ್ಯಕ್ಷ ಸುಹಾಝ್ ಅಳಕೆಮಜಲ್ ಇವರ ಮುಕ್ತಾಯ ಭಾಷಣದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು. ಫೈರೂಜ್ ಕಲ್ಲಡ್ಕ, ಫ಼ರೋಕ಼್ ಕಣ್ಣಂಗಾರ್, ನಾಸಿರ್ ನಂದಾವರ, ಮೊಹಮ್ಮದ್ ಅಲಿ ಬಂಟ್ವಾಲ್, ಆಬಿದ್ ನಂದಾವರ ಮುಂತಾದವರು ಸಹಕರಿಸಿದರು. ಪ್ರಶಸ್ತಿ ವಿತರಣೆಯು 29 ಜನವರಿಯಂದು ಹೋಟೆಲ್ ಅಲ ಖಾದ್ರಿ ಕಾಂಫೆರನ್ಚೆ ಹಾಲ್ ನಲ್ಲಿ ನಡೆಯುವ ಪೈಗಂ ಎ ರಸೂಲ್ ಕಾರ್ಯಕ್ರಮದಲ್ಲಿ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.











