ಕಡಬ : ರಬ್ಬರ್ ತೋಟಕ್ಕೆ ಬೆಂಕಿ

ಕಡಬ, ಜ.೨೩. ಸಮೀಪದ ಮರ್ಧಾಳದ ಮಿತ್ತೋಡಿ ಎಂಬಲ್ಲಿ ರಬ್ಬರ್ ತೋಟಕ್ಕೆ ಬೆಂಕಿ ಬಿದ್ದು ಸುಮಾರು ೫೦ ಮರಗಳು ಸುಟ್ಟು ಕರಕಲಾದ ಘಟನೆ ಭಾನುವಾರ ಸಂಜೆ ನಡೆದಿದೆ. ರಬ್ಬರ್ ತೋಟದ ಸಮೀಪದಿಂದ ವಿದ್ಯುತ್ ತಂತಿಯು ಹಾದು ಹೋಗಿದ್ದು, ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಬಿದ್ದಿದೆ ಎನ್ನಲಾಗಿದೆ. ತಕ್ಷಣವೇ ಊರವರು ಆಗಮಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.








Next Story





