ಮುಲ್ಕಿ : ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕನಿಗೆ 20-30 ಮಂದಿಯಿದ್ದ ತಂಡದಿಂದ ಗಂಬೀರ ಹಲ್ಲೆ

ಮುಲ್ಕಿ, ಜ.24: ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಸುಮಾರು 20-30 ಮಂದಿಯಿದ್ದ ತಂಡ ಆಟೋ ರಿಕ್ಷ ಅಡ್ಡಗಟ್ಟಿ ಗಂಬೀರ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಕೊಲ್ನಾಡು ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸೆಲೀನಾ ಶ್ರೀ ಮಂಜುನಾಥ್ ಬಸ್‌ನ ನಿರ್ವಾಹಕ ಕಾಟಿಪಳ್ಳ ನಿವಾಸಿ ಶಾಹಿಕ್ 23 ಗಂಭೀರ ಗಾಯಗೊಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಾಲಕ ಕಟಪಾಡಿ ನಿವಾಸಿ ಸಲ್ಮಾನ್ ಅಲ್ಪ ಪ್ರಮಾಣದ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಶುಕ್ರವಾರ ಸ್ಟೇಟ್ ಬ್ಯಾಂಕ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಸೆಲೀನಾ ಶ್ರೀ ಮಂಜುನಾಥ್ ಬಸ್‌ನ ನಿರ್ವಾಹಕ ಕಾಟಿಪಳ್ಳ ನಿವಾಸಿ ಶಾಹಿಕ್ ಹಾಘೂ ಆರೋಪಿ ಮುಲ್ಕಿ ಕೊಲ್ನಾಡು ನಿವಾಸಿ ಇರ್ಫಾನ್ ಎಂಬವನಿಗೆ ಮಾತಿಗೆ ಮಾತು ಬೆಳೆದು ತಲ್ಲಾಟನಡೆದಿತ್ತು ಎನ್ನಲಾಲಾಗಿದೆ. ಅಲ್ಲದೆ, ಈ ಸಂದರ್ಭ ಆರೋಪಿ ಇರ್ಫಾನ್ ಶಾಹಿಕ್‌ನಿಗೆ ಬೆದರಿಕೆಯೊಡೊಡ್ಡಿದ್ದ ಎನ್ನಲಾಗಿದೆ.
ಅದರಂತೆ ಶನಿವಾರ ರಾತ್ರಿ ಬಸ್ ಕೊಲಾಡು ಬಸ್ ನಿಲ್ದಾಣಕ್ಕೆ ತುಲುಪುತ್ತಿದ್ದಂತೆಯೇ ಆರೋಪಿ ಇರ್ಫಾನ್ ಹಾಗು 20-30 ಮಂದಿಯ ತಂಡ ಕಾರು ಹಾಗೂ ರಿಕ್ಕಾದಲ್ಲಿ ಬಂದು ಬಸ್‌ಗೆ ರಿಕ್ಷಾವನ್ನು ಅಡ್ಡ ಇಟ್ಟು ನಿರ್ವಾಹಕ ಹಾಗೂ ಚಾಲಕನಿಗೆ ಗಂಬೀರ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕೊಲ್ನಾಡಿನ ಯುವಕರ ತಂಟೆಗೆ ಬಂದರೆ ಎಲ್ಲಾ ಬಸ್ನವರಿಗೂ ಇದೇ ಗತಿ ಎಂದು ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಹಲ್ಲೆಗೊಳಗಾದ ಸಲ್ಮಾನ್ ಮುಲ್ಕಿ ಪೊಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈತನ್ಮಧ್ಯೆ ಆರೋಪಿ ಇರ್ಫಾನ್ ಮುಲ್ಕಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಸೆಲೀನಾ ಶ್ರೀ ಮಂಜುನಾಥ್ ಬಸ್‌ನ ನಿರ್ವಾಹಕ ಕಾಟಿಪಳ್ಳ ನಿವಾಸಿ ಶಾಹಿಕ್ ಮತ್ತು ಚಾಲಕ ಸಲ್ಮಾನ್ ಹಲ್ಲೆ ನಡೆಸಿದ್ದಾರೆ ಎಂದು ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಎರಡೂ ಕಡೆಯವರ ದೂರು ದಾಖಲಿಸಿಕೊಂಡಿರುವ ಮುಲ್ಕಿಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಚಾಲಕ ನಿರ್ವಾಹಕರಿಗೆ ಹಲ್ಲೆ ನಡೆಸಿ 24 ಗಂಟೆ ಕಳೆದರೂ ಯಾವೊಬ್ಬ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಚಾಲಕ ನಿರ್ವಾಹಕರು ಆರೋಪಿಸಿದ್ದಾರೆ.
ಹಲ್ಲೆನಡೆಸಲು ಬಂದಿದ್ದ ಆಟೋ ರಿಕ್ಷಾದ ನಂಬರ್ ಮತ್ತು ಕಾರಿನ ಬಣ್ಣ ಹಾಗೂ ಚಹರೆ ಸಹಿತ ದೂರಿನಲ್ಲಿ ತಿಳಿಸಲಾಗಿದೆ. ಅದರೆ ಈವರೆಗೆ ದುಷ್ಕರ್ಮಿಗಳನ್ನೂ ಬಂಧಿಸದೆ ವಾಹನಗಳನ್ನೂ ವಶಕ್ಕೆ ಪಡೆದಿಲ್ಲ ಎಂದು ಆರೋಪಿಸಿದ್ದಾರೆ.
ಆರೋಪಿಗಳು ರಾಜಾರೋಷವಾಗಿ ಸುತ್ತಾಡುತ್ತಿದ್ದಾರೆ. ಪೊಲೀಸರು ಆರೋಪಿಯ ಪರವಾಗಿದ್ದಾರೆ ಎಂದು ಸಂಶಯ ವ್ಯಕ್ತ ಪಡಿಸಿರುವ ಚಾಲಕ ನಿರ್ವಾಹಕರು, ಸೋಮವಾರ ಸಂಜೆ 7 ಗಂಟೆಯ ಒಳಗಾಗಿ ಆರೋಪಿಗಳ ಸಹಿತ ವಾಹನಗಳನ್ನು ವಶಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮುಲ್ಕಿ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.







