ಮುಲ್ಕಿ : ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ (ರಿ) 35ನೇ ವರ್ಷದ ರಿಫಾಇಯಾ ದಫ್ ರಾತೀಬ್ ಹಲ್ಕಾ

ಮುಲ್ಕಿ, ಜ. 24: ಇಲ್ಲಿನ ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ (ರಿ) ಹಾಗೂ ರಿಯಾಲುಲ್ ಇಸ್ಲಾಂ ಜಮಾಅತ್ ಕಮಿಟಿಗಳ ಆಶ್ರಯದಲ್ಲಿ 35ನೇ ವರ್ಷದ ರಿಫಾಇಯಾ ದಫ್ ರಾತೀಬ್ ಹಲ್ಕಾ, ಜಲಾಲಿಯಾ ರಾತೀಬ್ ಹಾಗೂ ಧಾರ್ಮಿಕ ಪ್ರವಚನ ಶನಿವಾರ ಸಮಾರೋಪ ಗೊಂಡಿತು.
ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಬಿ.ಜೆ.ಎಂ. ಪಕ್ಷಿಕೆರೆಯ ಖತೀಬ್ ಅಲ್‌ಹಾಜ್ ಅಬ್ದುಲ್ ಖಾದರ್ ಮದನಿ, ಸಮುದಾಯದಲ್ಲಿ ಈಮಾನ್ ಮತ್ತು ಐಕ್ಯತೆಯ ಕೊರತೆ ಹೆಚ್ಚಿದೆ. ಅದನ್ನು ನೀಗಿಸಲು ಯುವ ಜನತೆ ಮುಂದಡಿಇಡಬೇಕು. ಇಸ್ಲಾಂ ಶಾಂತಿ, ಪ್ರೀತಿ, ಸಹೋದರತೆಯನ್ನು ವಿಶ್ವಕ್ಕೆ ಸಾರಿದ ಧರ್ಮ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬಿ.ಜೆ.ಎಂ. ಪಕ್ಷಿಕೆರೆಯ ಅಧ್ಯಕ್ಷ ಕೆ.ಯು. ಮುಹಮ್ಮದ್ ವಹಿಸಿದ್ದರು. ಕೃಷ್ಣಾಪುರದ ಕೇಂದ್ರ ಜುಮಾ ಮಸೀದಿಯ ಖತೀಬ್ ಉಮರ್ ಫಾರೂಕ್ ಸಖಾಫಿ ಮುಖ್ಯ ಪ್ರಭಾಷಣ ಗೈದರು. ಅಲ್‌ಹಾಜ್ ಇಬ್ನ್ ಮೌಲಾನಾ ತಂಘಳ್ ದುವಾ ಪ್ರಾರ್ಥನೆಗೈದರು. ಅಬ್ದುಲ್ ಕರೀಂ ಸಖಾಫಿ, ಕಿನ್ನಿಗೋಳಿ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಸಖಾಫಿ, ಮಾಜೀ ಖತೀಬ್ ಡಿ. ಜೆ. ಮುಹ್ಮುದ್ ಮುಸ್ಲಿಯಾರ್, ಶರೀಫ್ ಖಾಸಿಮಿ, ಅಶ್ರಫ್ ಅಂಜದಿ, ಮುಸ್ತಫಾ ಝೈನಿ, ಕಲಂದರ್ ಸದಿ, ಹಾಜೀ ಮೀರಾನ್ ತೌಫೀಕ್, ಅಬ್ದುಲ್ ಹಮೀದ್, ತೌಫೀಕ್ ಬಾವ, ಹಾಜೀ ಅಬ್ದುಲ್ ಲತೀಫ್ ಮತ್ತಿತರರು ಉಪಸ್ಥಿತರಿದ್ದರು.





