ಮೂಡುಬಿದಿರೆ : ಶ್ರೀ ರಾಮಕ್ಷತ್ರಿಯ ಸೇವಾ ಸಂಘದ ವಾರ್ಷಿಕೋತ್ಸವ, ಸನ್ಮಾನ

ಮೂಡುಬಿದಿರೆ : ಶ್ರೀ ರಾಮಕ್ಷತ್ರಿಯ ಸೇವಾ ಸಂಘ (ರಿ), ಶ್ರೀ ರಾಮಕ್ಷತ್ರಿಯ ಮಹಿಳಾ ವೃಂದ, ಯುವ ವೃಂದ ಮತ್ತು ಭಜನಾ ಸಮಿತಿಯ ಇವುಗಳ ವಾರ್ಷಿಕೋತ್ಸವ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ರವಿವಾರ ಸಮಾಜ ಮಂದಿರ ಸಭಾದಲ್ಲಿ ನಡೆಯಿತು. ಮಂಗಳೂರು ಎಸ್‌ಡಿಎಂ ಲಾ ಕಾಲೇಜಿನ ಸಹ ಪ್ರಾಧ್ಯಾಪಕ ಸಾಯಿನಾಥ ಮಲ್ಲಿಗೆ ಮಾಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘದ ಸದಸ್ಯರೆಲ್ಲರೂ ಒಗ್ಗಟ್ಟಿನಲ್ಲಿದ್ದರೆ ಸಂಘ ಅಭಿವೃದ್ಧಿಯನ್ನು ಹೊಂದಲು ಸಾಧ್ಯ. ಮೂಡುಬಿದಿರೆಯ ಸಂಘವು ಈ ನಿಟ್ಟಿನಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು. ಮಂಗಳೂರು ಶ್ರೀ ರಾಮಕ್ಷತ್ರಿಯ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಜೆ.ರವೀಂದ್ರ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸನ್ಮಾನ : ಸಾಧಕರಾದ ಶ್ರೀ ರಾಮಕ್ಷತ್ರಿಯ ಸಮಾಜದ ಕುಲಪುರೋಹಿತ ಉಡುಪಿ ಮಾಧವ ಭಟ್ ಮತ್ತು ನಿವೃತ್ತ ಶಿಕ್ಷಕ ಎ.ಪ್ರಭಾಕರ ರಾವ್ ಪೆರಿಂಜೆ ಇವರನ್ನು ಈ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ವಿದ್ಯಾರ್ಥಿ ಸಾಧಕರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ರಾಮಕ್ಷತ್ರಿಯ ಸೇವಾ ಸಂಘದ ಗೌರವಾಧ್ಯಕ್ಷ ನಿತ್ಯಾನಂದ ಕೋಟೆ, ಮಹಿಳಾ ಸಂಘದ ಅಧ್ಯಕ್ಷೆ ಶಶಿಕಲಾ ಸುರೇಂದ್ರ, ಕಾರ್ಯದರ್ಶಿ ಶಾಂತಿ ಗಣೇಶ್, ಯುವ ವೃಂದದ ಅಧ್ಯಕ್ಷ ಸೂರ್ಯ ಆರ್.ರಾವ್, ಕಾರ್ಯದರ್ಶಿ ಸಂದೇಶ್ ಕೆ.ರಾವ್ ಹಾಗೂ ಭಜನಾ ಮಂಡಳಿಯ ಭವಾನಿ ಶಂಕರ್ ಉಪಸ್ಥಿತರಿದ್ದರು.






