ನವದೆಹಲಿ : ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ನವದೆಹಲಿ.ಜ.24: ಅಸಾಧಾರಣ ಧೈರ್ಯ ಹಾಗೂ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಪ್ರತಿವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗಳನ್ನು ದೆಹಲಿಯಲ್ಲಿ ಪ್ರಧಾನಿ ನರೇಂದ್ರಮೋದಿ, ವಿತರಿಸಿದರು.
22 ಬಾಲಕರು ಮತ್ತು ಮೂವರು ಬಾಲಕಿಯರು2015 ನೇ ಸಾಲಿಗೆ ಈ ಪ್ರಶಸ್ತಿ ಸ್ವೀಕರಿಸಿದರು. ಈ ಪೈಕಿ ಇಬ್ಬರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಯಿತು.ಪ್ರತಿಷ್ಠಿತ ಭಾರತ್ ಪ್ರಶಸ್ತಿಯನ್ನು ಮಹಾರಾಷ್ಟ್ರದ ಹುಡುಗ ಗೌರವ್ ಕೌದುಜೀ ಸಹಸ್ರಬುದ್ದೇಗೆ ಮರಣೋತ್ತರವಾಗಿ ನೀಡಲಾಗಿದೆ.ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯಾದ ಗೀತಾ ಚೋಪ್ರ ಪ್ರಶಸ್ತಿಯನ್ನು ತೆಲಂಗಾಣದ ಎಂಟು ವರ್ಷದ ಹುಡುಗಿ ಶಿವಂಪೆಟ್ರುಚಿತಾ ಪಡೆದುಕೊಂಡಳು. ಸಂಜಯ್‌ಚೋಪ್ರ ಪ್ರಶಸ್ತಿಯನ್ನು ಉತ್ತರಖಂಡಾದ ಹುಡಗು ಅರ್ಜುನ್ ಸಿಂಗ್ ಗೆ ನೀಡಲಾಯಿತು. ಪ್ರಶಸ್ತಿ ವಿತರಿಸಿ ಮಾತನಾಡಿದ ಪ್ರಧಾನಿ ಮೋದಿ, ಸಣ್ಣ ವಯಸ್ಸಿನಲ್ಲಿಯೇ ಅಸಾಧಾರಣ ಶೌರ್ಯ ಮೆರೆಯುವ ಮಕ್ಕಳ ಸಾಧನೆ ದೊಡ್ಡದು . ಮಕ್ಕಳು ತಮ್ಮ ಜೀವನದಲ್ಲಿ ಸದಾಸಮಯ ಪ್ರಜ್ಞೆಮತ್ತು ಜ್ಞಾನಾರ್ಜನೆಗೆ ಮಹತ್ವ ನೀಡಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೇನಕಾ ಗಾಂಧಿ ಉಪಸ್ಥಿತರಿದ್ದರು. ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ಭವ್ಯ ಪಥಸಂಚಲನದಲ್ಲಿ ಈ ಪ್ರಶಸ್ತಿ ವಿಜೇತ ಮಕ್ಕಳನ್ನು ಆನೆಗಳ ಮೇಲೆ ಕೂರಿಸಿ ಕರೆದೊಯ್ಯಲಾಗುವುದು





