ದಲಿತ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ: ಭೀತಿಯಿಂದ ಊರು ತೊರೆದ ಕುಟುಂಬ

ಝಾನ್ಸಿ: ದಲಿತ ಕುಟುಂಬವೊಂದನ್ನು ರೌಡಿಗಳು ಹಿಗ್ಗಾಮುಗ್ಗ ಹೊಡೆದು ಊರು ತೊರೆಯುವಂತೆ ಮಾಡಿದ ಘಟನೆಝಾನ್ಸಿಯಿಂದ ವರದಿಯಾಗಿದೆ. ಇಲ್ಲಿಗೆ ಸಮೀಪದ ಟಹ್ರೌಲಿ ಗ್ರಾಮದ ಪಿಪಾರದ ನಿವಾಸಿ ಕಾರ್ಮಿಕನಾದ ದಲಿತ ಯುವಕ ಅಂತಿಮ್ ಕುಮಾರ್ ಎಂವರನ್ನು ಗೂಂಡಾಗಳು ಮಾರಣಾಂತಿಕವಾಗಿ ಹೊಡೆದು ಕೈಕಾಲು ಮುರಿದು ಹಾಕಿದ್ದಲ್ಲದೆ ಪತಿಯ ರಕ್ಷಣೆಗೆ ಧಾವಿಸಿದ ಪತ್ನಿ ಅರ್ಚನಾರನ್ನು ವಿವಸ್ತ್ರಗೊಳಿಸಿ ಹೊಡೆದಿದ್ದಾರೆ. ಇಷ್ಟಕ್ಕೆ ಅವರ ಕೋಪ ನಿಂತಿರಲಿಲ್ಲ ಶರಾಬು ಅಂಗಡಿ ಎತ್ತಿಹೊಯ್ದು ದಲಿತ ಯುವಕನ ಗಾಯಗಳಿಗೆ ಶರಾಬನ್ನು ಸುರಿದಿದ್ದಾರೆ. ಅಮೇಲೆ ಅವನನ್ನುಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನಾನಂತರ ದಲಿತ ಕುಟುಂಬ ಹೆದರಿಕೆಯಿಂದ ಊರು ತೊರೆದಿದೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ಅಂತಿಮಕುಮಾರ್ ಪೊಲೀಸ್ ಕಾನ್‌ಸ್ಟೇಬಲ್‌ನೊಬ್ಬ ರೌಡಿಯೊಬ್ಬನ ನೆರವಿನಿಂದ ನಡೆಸುತ್ತಿದ್ದ ಜೂಜು ಅಡ್ಡೆಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಸಂಬಂಧಿತ ಕಾನ್‌ಸ್ಟೇಬಲನಿಗೆ ೆ ಮೇಲಧಿಕಾರಿಗಳಿಂದ ಛೀಮಾರಿ ಸಿಕ್ಕಿತ್ತು. ಇದರಿಂದ ಕುಪಿತಗೊಂಡ ಆತ ಗೂಂಡಾಗಳನ್ನು ಛೂಬಿಟ್ಟು ಅಂತಿಮ್ ಕುಮಾರ್ ಮತ್ತು ಆತನ ಪತ್ನಿಯ ಮೇಲೆ ದಾರುಣ ಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ.





