ಮುಸ್ಲಿಂ ಲೀಗ್ ನ ಕೇರಳ ಯಾತ್ರೆಗೆ ಹೊಸಂಗಡಿಯಿಂದ ಅದ್ಧೂರಿ ಚಾಲನೆ

ಮಂಜೇಶ್ವರ : ಸೌಹಾರ್ಧತೆ , ಸಮತ್ವ , ಸಮನ್ವಯ ಎಂಬ ಘೋಷ ವಾಕ್ಯದೊಂದಿಗೆ ಮುಸ್ಲಿಂ ಲೀಗ್ ನೇತೃತ್ವದಲ್ಲಿ ಸಚಿವ ಪಿ.ಕೆ ಕುಞ್ಞಲಿಕುಟ್ಟಿ ನಾಯಕತ್ವದ ಕೇರಳ ಯಾತ್ರೆಗೆ ಹೊಸಂಗಡಿಯಿಂದ ಅದ್ಧೂರಿ ಚಾಲನೆ ದೊರೆಯಿತು. ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಲೀ ಶಿಹಾಬ್ ತಂಘಳ್ ಜಾಥಾ ನಾಯಕ ಪಿ.ಕೆ ಕುಞ್ಞಲಿಕುಟ್ಟಿಯವರಿಗೆ ದ್ವಜ ಹಸ್ತಾಂತರಿಸಿ ಯಾತ್ರೆಗೆ ಚಾಲನೆ ನೀಡಿದರು.
ಸಚಿವರುಗಳಾದ ಎಂ.ಕೆ ಮುನೀರ್ , ಇಬ್ರಾಹಿಂ ಕುಞ್ಞೆ , ಮಂಜಲಾಂಕುಳಂ ಅಲೀ ಅಬ್ದುರ್ರಬ್ಬ್ , ಸಂಸದರಾದ ಇ.ಅಹ್ಮದ್ , ಇ.ಟಿ ಮುಹಮ್ಮದ್ ಬಶೀರ್ , ಮುಖಂಡರುಗಳಾದ ಕೆ.ಪಿ.ಎ ಮಜೀದ್ , ಅಬ್ದುಸ್ಸಮದ್ ಸಮದಾನಿ , ಕೆ.ಎಂ ಶಾಜಿ , ಚೆರ್ಕಳಂ ಅಬ್ದುಲ್ಲ , ಪಿ.ಬಿ ಅಬ್ದುರ್ರಝಾಕ್ , ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ ಕುಞ್ಞೆಕಣ್ಣನ್ , ಡಿ.ಸಿ.ಸಿ ಅಧ್ಯಕ್ಷ ಸಿ.ಕೆ ಶ್ರೀಧರನ್ ಮೊದಲಾದವರು ಮಾತನಾಡಿದರು. ಸಾದಿಕಲೀ ಶಿಹಾಬ್ ತಂಘಳ್ ಅಧ್ಯಕ್ಷತೆ ವಹಿಸಿದರು. ಕೆ.ಪಿ.ಎ ಮಜೀದ್ ಸ್ವಾಗತಿಸಿದರು. ರಾಜ್ಯದ 140 ವಿಧಾನ ಸಭಾ ಕ್ಷೇತ್ರಗಳಲ್ಲಿ ಪರ್ಯಟನೆ ನಡೆಸಲಿರುವ ಯಾತ್ರೆಯು ಫೆಬ್ರುವರಿ 11 ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.







