Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ24 Jan 2016 11:19 PM IST
share


ನಾಳೆ ಸಂವಿಧಾನ ದಿನಾಚರಣೆ
ಪುತ್ತೂರು, ಜ.24: ಬಹುಜನ ವಿದ್ಯಾರ್ಥಿ ಸಂಘ(ಎಸ್‌ಬಿವಿ) ವತಿಯಿಂದ ಸಂವಿಧಾನ ದಿನಾಚರಣೆ ಮತ್ತು ಇತರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪಂಗಡದ ಸಮುದಾಯಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ಕುರಿತು ವಿಚಾರ ಸಂಕಿರಣ ಜ.26ರಂದು ಪೂರ್ವಾಹ್ನ ಪುತ್ತೂರಿನ ಎನ್‌ಜಿಒ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ವಿಚಾರ ಸಂಕಿರಣವನ್ನು ಪುತ್ತೂರು ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಂದರ ಸಿದ್ಯಾಳ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಬಿವಿಎಸ್ ಮುಖಂಡ ಸುರೇಶ್ ಪಿ.ಬಿ. ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳ್ತಂಗಡಿ ಗುರುದೇವ ಪ.ಪೂ.ಕಾಲೇಜ್‌ನ ಉಪನ್ಯಾಸಕಿ ಹೇಮಾವತಿ ಕೆ, ಜಿಲ್ಲಾ ಬಿವಿಎಸ್ ಮುಖಂಡರಾದ ಅವಿನಾಶ್ ಮತ್ತು ಆದರ್ಶ್ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

27ರಂದು ಮಾಧ್ಯಮ ಕಾರ್ಯಾಗಾರ
ಉಡುಪಿ,ಜ.24: ಜಿಲ್ಲಾಡಳಿತದ ವತಿಯಿಂದ ಮಣಿಪಾಲದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜ.27ರಂದು ಬೆಳಗ್ಗೆ 10:30ಕ್ಕೆ ‘ನ್ಯೂಸ್ ವಿಚ್ ಮ್ಯಾಟರ್ಸ್‌’ ಮಾಧ್ಯಮ ಕಾರ್ಯಾಗಾರ ಆಯೋಜಿಸಲಾಗಿದೆ.
 ಕಾರ್ಯಾಗಾರವನ್ನು ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ‘ದ ಹಿಂದೂ’ ದಿನಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಬಿ.ಎಸ್. ಸತೀಶ್ ಕುಮಾರ್, ಪ್ರಜಾ ಟಿವಿಯ ಹಿರಿಯ ವರದಿಗಾರ್ತಿ ಜ್ಯೋತಿ ಇರ್ವತ್ತೂರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

ಆಡಳಿತ ಭಾಷಾ ಮಸೂದೆ: ಜಿಲ್ಲಾಧಿಕಾರಿ ಕಚೇರಿ ಧರಣಿ
     ಕಾಸರಗೋಡು, ಜ.24: ಆಡಳಿತ ಭಾಷಾ ಮಸೂದೆ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳು ಹಾಗೂ ಸವಲತ್ತುಗಳಿಗೆ ಮಾರಕವಾಗಿ ಪರಿಣಾಮ ಬೀರಲಿದ್ದು, ಈ ನಿಟ್ಟಿನಲ್ಲಿ ಕನ್ನಡ ಸಮುದಾಯಗಳ ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ನೇತೃತ್ವದಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಆಡಳಿತ ಭಾಷಾ ಮಸೂದೆಯ ವಿರುದ್ಧ ೆ.2ರಂದು ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಮೆರವಣಿಗೆ ನಡೆಸಿ ಧರಣಿ ಹೂಡುವರು. ಬೆಳಗ್ಗೆ 9:30ಕ್ಕೆ ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಮೆರವಣಿಗೆ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಲಿದೆಂದು ಪ್ರಕಟಣೆ ತಿಳಿಸಿದೆ.

ಮರ್ಕಝುಲ್ ಹುದಾ ಸ್ಫಟಿಕ ಸಮ್ಮೇಳನ: ಸ್ವಾಗತ ಸಮಿತಿರಚನೆ
ಪುತ್ತೂರು, ಜ.24: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸ್ಫಟಿಕ ಮಹೋತ್ಸವದ ಸಮಾರೋಪ ಸಮ್ಮೇಳನವು ಎಪ್ರಿಲ್ 1, 2 ಮತ್ತು 3ರಂದು ಕುಂಬ್ರದಲ್ಲಿ ನಡೆಯಲಿದೆ. ಇದರ ಸ್ವಾಗತ ಸಮಿತಿ ರಚನಾ ಸಮಾವೇಶವು ಜ.29ರಂದು ಸಂಜೆ ಕುಂಬ್ರ ಮರ್ಕಝ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನಿ ಕಾಮಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾ.7: ಕಾನೂನು ಸಾಕ್ಷರತಾ ರಥ ಸಂಚಾರ
ಮಂಗಳೂರು, ಜ.24: ದ.ಕ ಜಿಲ್ಲೆಯಲ್ಲಿ ಸಾಮಾನ್ಯ ಜನರಿಗೂ ಕಾನೂನಿನ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರ 2016ರ ಮಾರ್ಚ್ 7 ರಿಂದ 30 ರವರೆಗೆ ದ.ಕ ಜಿಲ್ಲೆಯಾದ್ಯಂತ ಕಾನೂನು ಸಾಕ್ಷರತಾ ರಥ ಸಂಚಾರ ನಡೆಸಲಿದೆ ಎಂದು ಜಿಲ್ಲಾ ಕಾನೂನು ನೆರವು ಸೇವೆಗಳ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.

ಉಳ್ಳಾಲ: ವೌಲೀದ್‌ಪಾರಾಯಣ
ಕೋಟೆಪುರ,ಜ.24: ಉಳ್ಳಾಲ ಯಂಗ್‌ಮೆನ್ಸ್ ಅಸೋಸಿಯೇಶನ್ ವಯಿಂದ ಮಿಲಾದುನ್ನಬಿ ಅಂಗವಾಗಿ ವೌಲೀದ್ ಪಾರಾಯಣ ಇತ್ತೀಚೆಗೆ ಕೋಟೆಪುರ ಮಸೀದಿಯ ಖತೀಬ್ ಇರ್ಷಾದ್ ಸಖಾಫಿ ನೇತೃತ್ವದಲ್ಲಿ ನಡೆಯಿತು.
 ಕೋಟೆಪುರ ಮಸೀದಿಯ ಉಸ್ತಾದ್ ಅಝೀಝ್ ಸಖಾಫಿ, ಕೋಡಿ ಮಸೀದಿಯ ಉಸ್ತಾದ್ ಹಮೀದ್ ಮುಸ್ಲಿಯಾರ್, ಉಮರ್ ಮುಸ್ಲಿಯಾರ್, ಸಂಸ್ಥೆಯ ಅಧ್ಯಕ್ಷ ಹಾಜಿ ಅಹ್ಮದ್ ಅಬ್ಬಾಸ್, ಕಾರ್ಯದರ್ಶಿ ಯು.ಬಿ.ಬಶೀರ್, ಉಪಾಧ್ಯಕ್ಷ ಟಿ.ಉಮರಬ್ಬ, ಇಲ್ಯಾಸ್ ಕೋಟೆಪುರ ಉಪಸ್ಥಿತರಿದ್ದರು.

ಮೀನು ಮಾರುಕಟ್ಟೆ ಉದ್ಘಾಟನೆ
ಬಂಟ್ವಾಳ, ಜ. 24: ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ತಾಲೂಕಿನ ಸಿದ್ದಕಟ್ಟೆಯಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ನಿರ್ಮಾಣಗೊಂಡ 10 ಲಕ್ಷ ರೂ. ವೆಚ್ಚದ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿಗಮದ ಅಧ್ಯಕ್ಷ ಹಿರಿಯಣ್ಣ, ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ಸಂಗಬೆಟ್ಟು ಗ್ರಾಪಂ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಪಿಡಿಒ ಸಿಲ್ವಿಯಾ ಫೆರ್ನಾಂಡಿಸ್, ಕುಕ್ಕಿಪಾಡಿ ಗ್ರಾಪಂ ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ತಾಪಂ ಸದಸ್ಯೆ ರೇವತಿ ಆರ್. ಪೂಜಾರಿ, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ದೇವಪ್ಪ ಕರ್ಕೇರಾ, ಶೇಖರ ನಾಯ್ಕ, ಕೆ.ಮಯ್ಯದ್ದಿ, ಸುಲೋಚನಾ, ಪ್ರಭಾಕರ ಪ್ರಭು, ಡಾ. ಪ್ರಭಾಚಂದ್ರ ಜೈನ್, ಶಿವಾನಂದ ರೈ, ಎಪಿಎಂಸಿ ಸದಸ್ಯ ಎಸ್. ಎಂ.ಹುಸೈನ್, ಗುತ್ತಿಗೆದಾರ ಮಧ್ವರಾಜ್ ಜೈನ್ ಉಪಸ್ಥಿತರಿದ್ದರು.


ಬೆಸೆಂಟ್ ಕಾಲೇಜಿನಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ
ಮಂಗಳೂರು, ಜ.24: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್, ಮಹಿಳಾ ವ
ುತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ಜಂಟಿ ಆಶ್ರಯದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಲೈಂಗಿಕ ದೌಜರ್ನ್ಯದ ಬಗೆಗಿರುವ ಕಾನೂನುಗಳು ಹಾಗೂ ಸ್ವರಕ್ಷಣ ತಂತ್ರಗಳ ಬಗ್ಗೆ ಕಾರ್ಯಾಗಾರವನ್ನು ಇಂದು ಬೆಸೆಂಟ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಾಲ್ಕನೆ ಅಧೀನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ನೇರಳೆ ವೀರಭದ್ರಯ್ಯ ಭವಾನಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂಸದಸ್ಯ ಕಾರ್ಯದರ್ಶಿ, ಜಿಲಾ ಕಾನೂನು ಸೇವಾ ಪ್ರಾಧಿಕಾರ ದ.ಕ. ಜಿಲ್ಲೆಯ ಗಣೇಶ್ ಬಿ. ಹಾಗೂ ಮಂಗಳೂರು ಬಾರ್ ಅಸೋಸಿಯೇಶನ್‌ನ ಅಧ್ಯಕ ಎಸ್.ಪಿ.ಚೆಂಗಪ್ಪಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸುಲೋಚನಾ ನಾರಾಯಣ್ ವಹಿಸಿದ್ದರು. ಕಾಲೇಜಿನ ಸಂಚಾಲಕ ಕೆ.ದೇವಾನಂದ ಪೈ ಉಪಸ್ಥಿತರಿದ್ದರು. ಮಹಿಳೆಯರ ಸ್ವರಕ್ಷಣಾ ತಂತ್ರಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಮಂಗಳೂರು ಬಾರ್ ಅಸೋಸಿಯೇಶನ್ ವಕೀಲೆ ಗಾಯತ್ರಿ ಸಿ.ಯವರು ನೀಡಿದರು.

ನರ್ಸಿಂಗ್ ತರಬೇತಿ
ಮಣಿಪಾಲ,ಜ.24: ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿ ನಿಯರಿಗೆೆ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳನ್ನು ಪರಿಚಯಿಸುವ ತರಬೇತಿ ಶಿಬಿರ ಶಿವಳ್ಳಿಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಇತ್ತೀಚೆಗೆ ನಡೆಯಿತು. ಮಾಹಿತಿ ಶಿಬಿರವನ್ನು ಖ್ಯಾತ ವೈದ್ಯೆ ಮಣಿಪಾಲ ಸೋನಿಯ ಕ್ಲಿನಿಕ್‌ನ ಡಾ.ಗೌರಿ ಉದ್ಘಾಟಿಸಿದರು. ಬಿವಿಟಿಯ ಐ.ಜಿ.ಕಿಣಿ ಮಾತನಾಡಿದರು. ಟ್ರಸ್ಟಿ ಎ.ಲಕ್ಷ್ಮೀಬಾಯಿ ಸ್ವಾಗತಿಸಿದರು.

 ಪ್ರವಾದಿ ಜೀವನ ಮತ್ತು ಸಂದೇಶ: ಕಾರ್ಯಕ್ರಮ
ಉಳ್ಳಾಲ, ಜ.24: ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ವತಿಯಿಂದ ಇತ್ತೀಚೆಗೆ ಉಳ್ಳಾಲ ಪೇಟೆಯ ಬೋರ್ಡ್ ಹೈಸ್ಕೂಲ್‌ಗೆ ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶ ಪರಿಚಯದ ಪ್ರಯುಕ್ತ 2 ಗೋಡೆ ಗಡಿಯಾರಗಳನ್ನು ಹಾಗೂ ಶಾಲೆಯ ಶಿಕ್ಷಕ- ಶಿಕ್ಷಕಿಯರಿಗೆ ‘ಪ್ರವಾದಿ ಜೀವನ ಮತ್ತು ಸಂದೇಶ’ಎಂಬ ಪುಸ್ತಕವನ್ನು ನೀಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ಜೊತೆ ಕಾರ್ಯದರ್ಶಿ ಅಹ್ಮದ್ ಶರೀಫ್ ಪ್ರವಾದಿ ಮುಹಮ್ಮದ್(ಸ.)ರವರ ಜೀವನ ಮತ್ತು ಸಂದೇಶವನ್ನು ಪರಿಚಯ ಪಡಿಸಿದರು. ಶಾಲಾಡಳಿತ ಮಂಡಳಿ ಹಾಗೂ ಉಳ್ಳಾಲ ಮೇಲಂಗಡಿಯ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಮುಸ್ತಫ ಅಬ್ದುಲ್ಲ, ಶಾಲಾಡಳಿತ ಮಂಡಳಿಯ ಸದಸ್ಯರಾದ ಅಬ್ದುರ್ರಹ್ಮಾನ್, ಶಂಸುದ್ದೀನ್ ಬಿ.ಕೆ. ಉಪಸ್ಥಿತರಿದ್ದರು. 

ರುಡ್‌ಸೆಟ್‌ನಿಂದ ತರಬೇತಿಗೆ ಅರ್ಜಿ ಆಹ್ವಾನ
ಬೆಳ್ತಂಗಡಿ, ಜ.24: ಉಜಿರೆಯ ರುಡ್‌ಸೆಟ್ ಸಂಸ್ಥೆ ವಿವಿಧ ತರಬೇತಿಗಳಿಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. 1.ಕಂಪ್ಯೂಟರ್ ಡಿ.ಟಿ.ಪಿ. ಫೆ.1ರಿಂದ ಮಾ.16ರವರೆಗೆ (45 ದಿನಗಳು), 2.ವಸ್ತ್ರ ವಿನ್ಯಾಸ (ಮಹಿಳೆಯರಿಗೆ) ಫೆ.5.ರಿಂದ ಫೆ.25ರವರೆಗೆ (21 ದಿನಗಳು), 3.ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಸಂಸ್ಕರಣೆ ಮಾ.2.ರಿಂದ ಮಾ.16ರವರೆಗೆ (15 ದಿನಗಳು), 4.ಕೃತಕ ಆಭರಣ ತಯಾರಿಕೆ ಮಾ.4ರಿಂದ ಮಾ.18ರವರೆಗೆ (15 ದಿನಗಳು), 5.ಬಟ್ಟೆಯ ಬ್ಯಾಗ್ ತಯಾರಿಕೆ ಮಾ.6ರಿಂದ ಮಾ.21ರವರೆಗೆ (15 ದಿನಗಳು).ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಯಲ್ಲಿ ಕೌಶಲ್ಯದ ಜೊತೆಗೆ ವ್ಯಾಪಾರ ವಹಿವಾಟು, ಸೇವಾ ಕ್ಷೇತ್ರ, ಕೈಗಾರಿಕಾ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ಹಾಗೂ ಇನ್ನಿತರ ಮಹತ್ವದ ಉದ್ಯಮಶೀಲತೆಯ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು. ದ.ಕ., ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅಥವಾ ಸಂಸ್ಥೆಯ ವೆಬ್‌ಸೈಟ್‌ನಿಂದ (ಡಿಡಿಡಿ.್ಟ್ಠಛಿಠಿಜಿಠ್ಟಿಜ್ಞಿಜ್ಞಿಜ.ಟ್ಟಜ) ಅರ್ಜಿನಮೂನೆಯನ್ನು ಪಡೆದು ಭರ್ತಿ ಮಾಡಿ: ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ 574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.: 08256-236404ಗೆ ಸಂಪರ್ಕಿಸಬಹುದು.


 ನಾಳೆ ಹೋವರ್‌ಕ್ರಾಪ್ಟ್ ವೀಕ್ಷಣೆ ಮತ್ತು ಪ್ರಾತ್ಯಕ್ಷಿಕೆ 
ಮಂಗಳೂರು, ಜ.24: ಜ.26ರಂದು ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಕೋಸ್ಟ್‌ಗಾರ್ಡ್ ವತಿಯಿಂದ ಸಾರ್ವಜನಿಕರ ವೀಕ್ಷಣೆಗಾಗಿ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಅಪರಾಹ್ನ 2:30ರಿಂದ 5ರವರೆಗೆ ಹೋವರ್‌ಕ್ರಾಪ್ಟ್ ವೀಕ್ಷಣೆ ಮತ್ತು ಪ್ರಾತ್ಯಕ್ಷಿಕೆ ನಡೆಸುವ ಕಾರ್ಯಕ್ರಮ ಇರುವುದರಿಂದ ಆ ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಮೀನುಗಾರರಿಗೆ ಮುನ್ಸೂಚನೆ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಜಯ ಕಾಂಚನ್‌ಗೆ ಚಿನ್ನದ ಪದಕ 
ಮೂಡುಬಿದಿರೆ,ಜ.24: ಜಾರ್ಖಂಡ್‌ನ ಜಮ್ಸಡ್‌ಪುರಂನಲ್ಲಿ ಇತ್ತೀಚೆಗೆ ಜರಗಿದ ರಾಷ್ಟ್ರಮಟ್ಟದ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ವಿಜಯ ಕಾಂಚನ್ ಬೈಕಂಪಾಡಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 1 ಚಿನ್ನ ಮತ್ತು 1 ಕಂಚಿನ ಪದಕವನ್ನು ಗಳಿಸಿದ್ದಾರೆ. ಇವರು ಮೂಡುಬಿದಿರೆ ಪೊಲೀಸ್ ಠಾಣೆಯ ಸಿಬ್ಬಂದಿಯಾಗಿದ್ದಾರೆ.

ಪ್ರತಿಭಾನ್ವಿತೆ
ಮೂಡುಬಿದಿರೆ, ಜ.24: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2015ನೆ ಸಾಲಿನಲ್ಲಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ಅಯನಾ ವಿ.ರಮಣ್ ಶೇ.92.75 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಹಿರಿಯ ಸಂಗೀತ ವಿದ್ವಾಂಸ ಎಂ.ನಾರಾಯಣ್ ಶಿಷ್ಯೆಯಾಗಿರುವ ಈಕೆ, ಮೂಡುಬಿದಿರೆಯ ಆಳ್ವಾಸ್ ಆಂಗ್ಲಮಾಧ್ಯಮ ಶಾಲೆಯ 8ನೆ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಪತ್ರಕರ್ತಕೆ.ವಿ.ರಮಣ್ ಹಾಗೂ ಉಪನ್ಯಾಸಕಿ ಮೂಕಾಂಬಿಕಾ ಜಿ.ಎಸ್. ದಂಪತಿಯ ಪುತ್ರಿ.

ಪ್ರೊ. ಸ್ಮಿತಾಗೆ ಪಿಎಚ್‌ಡಿ ಪ್ರದಾನ
ಬಂಟ್ವಾಳ,ಜ.24:ಗರ್ಭಿಣಿಯರಿಗೆ ಉಂಟಾಗುವ ಸೊಂಟ ನೋವು ಕುರಿತಾದ ಪ್ರಬಂಧ ಮಂಡನೆಗೆ ಸ್ಮಿತಾ ಹರಿಕಿರಣ್ ಬಂಗೇರರಿಗೆ ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ವಳಚ್ಚಿಲ್ ಶ್ರೀನಿವಾಸ್ ಇನ್ಸ್‌ಟ್ಯೂಟ್ ಆಫ್ ಕಾಲೇಜಿನ ಉಪನ್ಯಾಸಕಿಯಾಗಿರುವ ಸ್ಮಿತಾ ಡಾ.ಮೊಲ್ಲಿ ಬಾಬು ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಇವರು ಎಂ.ಎಸ್. ವಿಜಯನ್ ಮತ್ತು ಕಲಾ ದಂಪತಿಯ ಪುತ್ರಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X