ಬೆಳ್ಮ ಬದ್ಯಾರ್: ನೂತನ ಕಚೇರಿ ಉದ್ಘಾಟನೆ

ಉಳ್ಳಾಲ, ಜ.24: ಆಧುನಿಕ ಲೋಕವು ನಾಗಾಲೋಟದಿಂದ ಸಾಗುತ್ತಿರುವಾಗ ಪಾರತ್ರಿಕ ಮೋಕ್ಷಕ್ಕೆ ಉಲಮಾಗಳು ತೋರಿಸಿಕೊಟ್ಟ ಸತ್ಯ ಪಥದಲ್ಲೇ ನಡೆಯುವುದು ಪ್ರವಾದಿ ಸ್ನೇಹದ ಭಾಗವಾಗಿದೆ ಎಂದು ಸೈಯದ್ ಸಿ.ಟಿ.ಎಂ. ತಂಙಳ್ ನುಡಿದರು. ಬೆಳ್ಮ ಬದ್ಯಾರ್ ಎಸ್‌ವೈಎಸ್, ಎಸ್ಸೆಸ್ಸೆಫ್ ನೂತನ ಕಚೇರಿಯ ಉದ್ಘಾಟನೆ ಹಾಗೂ ಮೌಲೀದ್ ಮಜ್ಲಿಸ್‌ನ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು. ಮಂಗಳೂರು ತಾಲೂಕು ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಅಶ್-ಅರಿಯ್ಯಿ ಮಹಮ್ಮದಲಿ ಸಖಾಫಿ ಕಿನ್ಯ ಮುಖ್ಯ ಪ್ರಭಾಷಣ ಮಾಡಿದರು. ಜಮಾಅತ್ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಇಸ್ಮಾಯೀಲ್ ಸಅದಿ ಉದ್ಘಾಟಿಸಿದರು. ದೇರಳಕಟ್ಟೆ ಸೆಂಟರ್ ಎಸ್‌ವೈಎಸ್ ಅಧ್ಯಕ್ಷ ಏಷ್ಯನ್ ಅಹ್ಮದ್ ಹಾಜಿ, ದೇರಳಕಟ್ಟೆ ಜಮಾಅತ್ ಅಧ್ಯಕ್ಷ ಅಬೂಬಕರ್ ಹಾಜಿ, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಬೆಳ್ಮ ಗ್ರಾಪಂ ಸದಸ್ಯ ಡಿ. ಕಬೀರ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್, ಉಪಾಧ್ಯಕ್ಷ ಜಮಾಲುದ್ದೀನ್ ಸಖಾಫಿ ಬದ್ಯಾರ್, ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ಲತೀಫ್, ಜಮಾಅತ್ ಕಾರ್ಯದರ್ಶಿ ಅಬ್ದುರ್ರಝಾಕ್ ಕಂಪ, ಖಿದ್ಮತ್ ಉಪಾಧ್ಯಕ್ಷ ಸಿರಾಜ್ ಬದ್ಯಾರ್, ಯೂಸುಫ್ ರಝ್ವಿ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಅಧ್ಯಕ್ಷ ಹಬೀಬ್ ಸಖಾಫಿ ಸ್ವಾಗತಿಸಿದರು.





