ಸುಳ್ಯದಲ್ಲಿ ಕಾವ್ಯ ಕಾವೇರಿ ಕಾವಿ ಕುಟೀರದ ಉದ್ಘಾಟನೆ
ಸುಳ್ಯ, ಜ.24: ಪರಂಪರೆಯ ಕಾವಿ ಚಿತ್ತಾರ, ಗೀರು ಶಿಲ್ಪ ಪ್ರದರ್ಶನ ಮತ್ತು ಕಾವಿ ಕುಟೀರ ಉದ್ಘಾಟನಾ ಸಮಾರಂ ಸುಳ್ಯ ಮೊಗರ್ಪಣೆ ಬಳಿ ಇರುವ ಹಿರಿಯ ಲೇಖಕಿ ಜಯಮ್ಮ ಚೆಟ್ಟಿಮಾಡ ಅವರ ಕಾವ್ಯ ಕಾವೇರಿ ಮನೆಯಲ್ಲಿ ನಡೆಯಿತು.
ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ, ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ, ಸುಳ್ಯದ ಕಾವ್ಯ ಕಾವೇರಿ ಇದರ ವತಿಯಿಂದ ನಡೆದ ಕಾರ್ಯಕ್ರಮವನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಉದ್ಘಾಟಿಸಿ ಶುಭ ಹಾರೈಸಿದರುಸೋಣಂಗೇರಿ ಬಯಲು ಚಿತ್ರಾಯಲದ ನಿರ್ದೇಶಕ ಮೋಹನ ಸೋನ ಮುಖ್ಯ ಅತಿಥಿಯಾಗಿದ್ದರು.ಉಡುಪಿಯ ಪ್ರಾಚ್ಯವಸ್ತು ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾವಿ ಕಲೆ, ಗೀರು ಕಲೆಯ ಕುರಿತು ಜಾನಪದ ವಿಶ್ವ ವಿದ್ಯಾನಿಲಯಗಳ ಮೂಲಕ ಡಿಪ್ಲೊಮಾ ಅಥವ ಸರ್ಟಿಫಿಕೆಟ್ ಕೋರ್ಸ್‌ನ್ನು ಇಲ್ಲಿ ಆರಂಭಿಸುವ ಚಿಂತನೆ ಇದೆ ಎಂದವರು ಪ್ರಕಟಿಸಿದರು. ಮಂಗಳೂರಿನ ಕಾವಿಚಿತ್ರ ಕಲಾವಿದೆ ವೀಣಾಶ್ರೀನಿವಾಸ,ಮದುವೆಗದ್ದೆ ಬೋಜಪ್ಪಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೇಖಕಿ ಜಯಮ್ಮ ಚೆಟ್ಟಿಮಾಡ ಸ್ವಾಗತಿಸಿ, ಯಶ್ವಿತ್ ಕಾಳಮ್ಮನೆ ವಂದಿಸಿದರು. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಪ್ರಾತ್ಯಕ್ಷಿಕೆ:ಮಂಗಳೂರಿನ ಕಾವಿ ಚಿತ್ರ ಕಲಾವಿದೆ ವೀಣಾ ಶ್ರೀನಿವಾಸ ಗೀರು ಶಿಲ್ಪ ರಚನೆ ಕುರಿತು ಅವರು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. ಕೈಮಣ್ಣು ಕುರಿತು ಮದುವೆಗದ್ದೆ ಬೋಜಪ್ಪ ಗೌಡ ಮಾಹಿತಿ ನೀಡಿದರು.





