‘ಮ್ಯೂಸಿಕ್ ಫಾರ್ ಹೀಲಿಂಗ್’ ಸಿಡಿ ಬಿಡುಗಡೆ

ಉಡುಪಿ, ಜ.24: ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು ನಯಾತಿ ಹೆಲ್ತ್ ಕೇರ್ ಇವರ ‘ಮ್ಯೂಸಿಕ್ ಫಾರ್ ಹೀಲಿಂಗ್’(ಚಿಕಿತ್ಸೆಗಾಗಿ ಸಂಗೀತ) ಎಂಬ ಸಿಡಿಯನ್ನು ದರ್ಬಾರ್ ಸಭಾಂಗಣದ ಆನಂದತೀರ್ಥ ಮಂಟಪದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದರು.
ಸಂಗೀತ ಮತ್ತು ಚಿಕಿತ್ಸೆಯ ನಡುವಿನ ಸಂಕೀರ್ಣವಾದ ಸಂಬಂಧವನ್ನು ಪರಿಗಣಿಸಿ ಮ್ಯೂಸಿಕ್ ಫಾರ್ ಹೀಲಿಂಗ್ ಎಂಬ ಪರಿಕಲ್ಪನೆಯಲ್ಲಿ ಕೃಷ್ಣ ಭಜನ್‌ಗಳಿರುವ ಈ ಸಿಡಿಯನ್ನು ತಯಾರಿಸಲಾದೆ. ಇದನ್ನು ರಚಿಸಿ ಹಾಡಿದವರು ಮಥುರಾ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ರೇಡಿಯೇಶನ್ ಅಂಕಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಶಂತನು ಚೌಧರಿಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ನಯಾತಿ ಹೆಲ್ತ್ ಕೇರ್‌ನ ಅಧ್ಯಕ್ಷೆ ನೀರಾ ರಾಡಿಯಾರನ್ನು ಅವರ ಸಾಮಾಜಿಕ ಹಾಗೂ ವೈದ್ಯಕೀಯ ಸೇವೆಗಳಿಗಾಗಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
Next Story





