ಮಂಗಳೂರು : ವ್ಯಕ್ತಿಗೆ ಚೂರಿ ಇರಿತ
ಮಂಗಳೂರು, ಜ. 24: ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಇಂದು ನಡೆದಿದೆ.
ಬಜಿಲಕೇರಿಯ ನಿವಾಸಿ ಹರಿಪ್ರಸಾದ್ (42) ಎಂಬವರೇ ಚೂರಿ ಇರಿತಕ್ಕೊಳಗಾದವರು. ಆರೋಪಿ ಕೆ.ಸಿ. ರೋಡ್ ನಿವಾಸಿ ನಿತಿನ್ ಹಾಗೂ ಸಂಗಡಿಗರು ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.
ಹಳೇ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಆರೋಪಿ ನಿತಿನ್ ಈ ಹಿಂದೆ ಬಜಿಲಕೇರಿಯ ನಿವಾಸಿಯಾಗಿದ್ದು, ಪ್ರಸ್ತುತ ತಲಪಾಡಿ ಕೆ.ಸಿ. ರೋಡ್‌ನಲ್ಲಿ ವಾಸವಾಗಿದ್ದಾನೆ.
ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





