ಹಳೆ ವೈಷಮ್ಯ: ವ್ಯಕ್ತಿಗೆ ತಂಡದಿಂದ ಚೂರಿ ಇರಿತ
ಮಂಗಳೂರು, ಜ.24: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ನಗರದಲ್ಲಿಂದು ನಡೆದಿದೆ.
ಬಜಿಲಕೇರಿಯ ನಿವಾಸಿ ಹರಿಪ್ರಸಾದ್ (42) ಎಂಬವರೇ ಚೂರಿ ಇರಿತಕ್ಕೊಳಗಾದವರು. ಕೆ.ಸಿ.ರೋಡ್ ನಿವಾಸಿ ನಿತಿನ್ ಹಾಗೂ ಸಂಗಡಿಗರು ಈ ಕೃತ್ಯ ಎಸಗಿದ್ದು, ಹಳೆಯ ವೈಷಮ್ಯವೇ ಕಾರಣ ಎಂದು ದೂರಲಾಗಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





