2016ರಲ್ಲಿ ಪಂಚ ಗ್ರಹಣಗಳು

ಇಂದೋರ್, ಜ. 24: 2016ನೆ ವರ್ಷವು ಐದು ಗ್ರಹಣಗಳಿಗೆ ಸಾಕ್ಷಿಯಾಗಲಿದೆ. ಆದರೆ ಈ ಪೈಕಿ ಕೇವಲ ಎರಡು ಗ್ರಹಣಗಳು ಭಾರತದಲ್ಲಿ ಗೋಚರವಾಗಲಿವೆ.
ಮಾರ್ಚ್ 9ರಂದು ಸಂಪೂರ್ಣ ಸೂರ್ಯಗ್ರಹಣ ದೊಂದಿಗೆ ಪಂಚ ಗ್ರಹಣಗಳ ಸರಮಾಲೆ ಆರಂಭಗೊಳ್ಳಲಿದೆ. ಇದು ಈಶಾನ್ಯ ಭಾರತದಲ್ಲಿ ಭಾಗಶಃ ಗೋಚರಿಸಲಿದೆ ಎಂದು ಉಜ್ಜೈನ್‌ನ ಜಿವಾಜಿ ವೀಕ್ಷಣಾಲಯದ ಅಧೀಕ್ಷಕ ಡಾ.ರಾಜೇಂದ್ರ ಪ್ರಸಾದ್ ಗುಪ್ತ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ನಂತರ ಮಾ.23ರಂದು ಸಂಭವಿಸಲಿರುವ ಖಂಡ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಆ.18ರಂದು ಇನ್ನೊಂದು ಖಂಡ ಚಂದ್ರಗ್ರಹಣ ಮತ್ತು ಸೆ.1ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿವೆ. ಆದರೆ ಇವೆರಡೂ ಗ್ರಹಣಗಳು ಭಾರತದಲ್ಲಿ ಗೋಚರಗೊಳ್ಳುವುದಿಲ್ಲ.
ಆದರೆ ಗ್ರಹಣಗಳ ಸರಮಾಲೆಯಲ್ಲಿ ಕೊನೆಯದಾಗಿ ಸೆ.16ರಂದು ಸಂಭವಿಸಲಿರುವ ಇನ್ನೊಂದು ಖಂಡ ಚಂದ್ರಗ್ರಹಣವು ಭಾರತದಲ್ಲಿ ಗೋಚರವಾಗಲಿದೆ ಎಂದು ಗುಪ್ತ್ ತಿಳಿಸಿದರು.
Next Story





