ಮೊಯ್ದಿನ್ ಬಾವರಿಗೆ ದಮ್ಮಾಮ್ನಲ್ಲಿ ಸನ್ಮಾನ
ಮಂಗಳೂರು, ಜ.24: ಸೌದಿ ಅರೆಬಿಯಾದ ದಮ್ಮಾಮ್ನಲ್ಲಿ ಉದ್ಯೋಗದಲ್ಲಿರುವ ಮಂಗಳೂರು ಉತ್ತರ ವ್ಯಾಪ್ತಿಯ ನಾಗರಿಕರ ವತಿಯಿಂದ ಶಾಸಕ ಬಿ.ಎ.ಮೊಯ್ದಿನ್ ಬಾವರನ್ನು ದಮ್ಮಾಮ್ನಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಾಗರಿ ಕರು ಶಾಸಕರಿಗೆ ಮನವಿ ಸಲ್ಲಿಸಿ, ಮಂಗಳೂರಿನಿಂದ ದಮ್ಮಾಮ್ಗೆ ಪ್ರತೀದಿನ ಹೆಚ್ಚುವರಿ ವಿಮಾನ ಸಂಚಾರ ಆರಂಭಿಸಬೇಕು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರಿಗೆ ನಡೆಸಲಾಗುತ್ತಿರುವ ತಪಾಸಣೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಫಿಝಾ ಡೆವಲ ಪರ್ಸ್‌ನ ಬಿ.ಎಂ.ಫಾರೂಕ್, ಲಕ್ಕಿಸ್ಟಾರ್ ಗ್ರೂಪ್‌ನ ಶಮೀರ್, ಕಬೀರ್, ಹಾರಿಸ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.
Next Story





