ನೇತಾಜಿ ಮೊಮ್ಮಗ ಚಂದ್ರ ಬೋಸ್ ಬಿಜೆಪಿಗೆ ?

ಕೋಲ್ಕತಾ, ಜ.25: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಬಿಜೆಪಿಗೆ ಸೇರಲು ತಯಾರಿ ನಡೆಸಿದ್ದಾರೆ.
ಸೋಮವಾರ ಹೌರಾದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಅಧ್ಯಕ್ಷ ಅಮಿತ್ ಷಾ ಉಪಸ್ಥಿತಿಯಲ್ಲಿ ಬಿಜೆಪಿ ಸೇರಲಿದ್ದಾರೆಂದು ಮೂಲಗಳು ತಿಳಿಸಿವೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಂದ್ರ ಬೋಸ್ ಅವರು ಪಶ್ಚಿಮ ಬಂಗಾಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆಂದು ತಿಳಿದು ಬಂದಿದೆ.
ಬೋಸ್ ಈ ಬೆಳವಣಿಗೆಯ ಬಗ್ಗೆ ಏನನ್ನು ಹೇಳಿಲ್ಲ ಮತ್ತು ಬಿಜೆಪಿ ಈ ವಿಚಾರವನ್ನು ಇನ್ನೂ ಬಹಿರಂಗಪಡಿಸಿಲ್ಲ.
Next Story





