ಪಾಕಿಸ್ತಾನ ಸೇನೆಯಿಂದ ಎಂಟು ಶಂಕಿತ ಭಯೋತ್ಪಾದಕರ ಹತ್ಯೆ

ಇಸ್ಲಾಮಾ ಬಾದ್: ಪಾಕಿಸ್ತಾನದ ವಝೀರಿಸ್ತಾನದಲ್ಲಿ ಸೇನೆ ಕಾರ್ಯಾಚರಣೆಯಲ್ಲಿ ಎಂಟು ಭಯೋತ್ಪಾದಕರು ಸತ್ತಿದ್ದಾರೆ. ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಶನ್ಸ್(ಐಎಸ್ಪಿಆರ್) ಹೇಳಿಕೆ ನೀಡಿದ್ದು ಪಾಕಿಸ್ತಾನದ ವಾಯುಸೇನೆಯ ಜೆಟ್ ವಿಮಾನಗಳು ಉತ್ತರ ವಝೀರಿಸ್ತಾನದ ದತ್ತಖೇಲ್ ಮತು ಶಾವಲ್‌ನಲ್ಲಿ ಶಂಕಿತ ಭಯೋತ್ಪಾದಕರ ತಾಣಗಳನ್ನು ಗುರಿಯಾಗಿಟ್ಟು ವಾಯುದಾಳಿ ನಡೆಸಿದೆ. ಮೃತ ಭಯೋತ್ಪಾದಕರ ಪರಿಚಯವನ್ನು ಅದು ಬಿಡುಗಡೆಗೊಳಿಸಿಲ್ಲ. ಈ ವಾಯುದಾಳಿ ಉತ್ತರ ವಝೀರಿಸ್ತಾನದ ಸೇನೆಯ ಜರ್ಬ ಏ ಅರ್ಬ್ ಆಪರೇಶನ್‌ನ ಭಾಗವಾಗಿತ್ತು. ಇಲ್ಲಿವರೆಗೆ 3,000ಕ್ಕೂ ಅಧಿಕ ಭಯೋತ್ಪಾದಕರು ಸತ್ತಿದ್ದಾರೆ.
Next Story





