ಮೂಡುಬಿದಿರೆ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ

ಮೂಡುಬಿದಿರೆ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಜ್ಯೋತಿನಗರ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಆಚರಿಸಲಾಯಿತು.
ನಿವೃತ್ತ ಸೇನಾನಿ ಬಿ.ಜಯ ಶೆಟ್ಟಿ ಮತ್ತು ರಾಜೇಶ್ವರಿ ಇನ್‌ಫ್ರಾಟೆಕ್‌ನ ಕೆ.ದೇವಿಪ್ರಸಾದ್ ಶೆಟ್ಟಿ ನೇತಾಜಿಯವರ ಹೋರಾಟದ ಕುರಿತು ಮಾತನಾಡಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ, ಸದಸ್ಯ ಪ್ರಸಾದ್, ಸಂಯೋಜಕ ದೇವದಾಸ್, ಸಿ.ಆರ್.ಪಿ. ದಿನಕರ್ ವೇದಿಕೆಯಲ್ಲಿದ್ದರು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ವೇತಾ, ಸ.ಶಿಕ್ಷಕರಾದ ಪ್ರಸನ್ನ ಶೆಣೈ, ಅಂಬಿಕಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ವನಿತಾ ಸ್ವಾಗತಿಸಿ, ಶಿಕ್ಷಕಿಯರಾದ ಸುನೀತ ಪತ್ರಾವೊ ನಿರೂಪಿಸಿ, ವಿದ್ಯಾ ಎಂ. ವಂದಿಸಿದರು.
Next Story





