ಉಪ ಚುನಾವಣೆ: ಹೆಬ್ಬಾಳದಲ್ಲಿ ಭೈರತಿಗೆ ಅವಕಾಶ, ಜಾಫರ್ ಶರೀಫ್‌ಗೆ ಭಾರೀ ನಿರಾಸೆ

ಬೆಂಗಳೂರು, ಜ.25: ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಕುತೂಹಲ ಕೆರಳಿಸಿದ್ದ ಹೆಬ್ಬಾಳಕ್ಕೆ ಭೈರತಿ ಸುರೇಶ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ಜಾಫರ್ ಶರೀಫ್‌ಗೆ ಭಾರೀ ನಿರಾಸೆಯಾಗಿದೆ.
ಬೀದರ್‌ಗೆ ರಹೀಮ್ ಖಾನ್ ಮತ್ತು ದೇವದುರ್ಗಕ್ಕೆ ರಾಜಶೇಖರ್ ನಾಯಕ್‌ಗೆ ಟಿಕೆಟ್ ನೀಡಲಾಗಿದೆ
ಹೆಬ್ಬಾಳ ಕ್ಷೇತ್ರದ ಮೇಲೆ ಕಾಂಗ್ರೆಸ್‌ನ ಹಲವು ನಾಯಕರು ಕಣ್ಣಿಟ್ಟಿದ್ದರು. ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರು ಮೊಮ್ಮಗ ರೆಹಮಾನ್ ಶರೀಫ್‌ಗೆ ಟಿಕೆಟ್ ಗಾಗಿ ಲಾಭಿ ನಡೆಸಿದ್ದರು. ಆದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಪ್ತ ಭೈರತಿ ಸುರೇಶ್‌ಗೆ ನೀಡಲಾಗಿದೆ.
ಬಿಜೆಪಿ ಅಭ್ಯರ್ಥಿಗಳು: ಇದೇ ವೇಳೆ ವಿಪಕ್ಷ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಹೆಬ್ಬಾಳಕ್ಕೆ ವೈಎ ನಾರಾಯಣ ಸ್ವಾಮಿ, ಬೀದರ್‌ಗೆ ಪ್ರಕಾಶ್ ಖಂಡ್ರೆ ಮತ್ತು ದೇವದುರ್ಗಕ್ಕೆ ಶಿವನಗೌಡ ನಾಯಕ್‌ರನ್ನು ಅಭ್ಯರ್ಥಿಯಾಗಿ ಬಿಜೆಪಿ ಆಯ್ಕೆ ಮಾಡಿದೆ.
:
Next Story





