ಮಂಗಳೂರು: ಮಿಲ್ಲತ್ ಕ್ರೆಡಿಟ್ ಕೋ. ಓಪರೇಟಿವ್ ಸೊಸೈಟಿ ಲಿ. ನ ಪ್ರಧಾನ ಕಚೇರಿಯು ಸ್ಥಳಾಂತರಗೊಳ್ಳಲಿದೆ
ಮಂಗಳೂರು,ಜ.25: ನಗರದ ಬಂದರ್‌ನ ಅಜೀಜುದ್ದೀನ್ ರಸ್ತೆಯಲ್ಲಿ ರಫೀಕ್ ಕಾಂಪ್ಲೆಕ್ಸ್‌ನಲ್ಲಿರುವ ಮಿಲ್ಲತ್ ಕ್ರೆಡಿಟ್ ಕೋ. ಓಪರೇಟಿವ್ ಸೊಸೈಟಿ ಲಿ. ನ ಪ್ರಧಾನ ಕಚೇರಿಯು ಜ.28 ರಂದು ಬಂದರ್‌ನ ಅಜೀಜುದ್ದೀನ್ ರಸ್ತೆಯ ಸಾ ಪ್ಲಾಜಾದ 1 ನೇ ಮಹಡಿಗೆ ಸ್ಥಳಾಂತರಗೊಳ್ಳಲಿದೆ.
ನೂತನ ಕಚೇರಿಯನ್ನು ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಜೆಸಿಂತಾ ವಿಜಯ್ ಆಲ್ಪ್ರೆಡ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲ್ಲತ್ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷ ,ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮನಪಾ ಸದಸ್ಯರಾದ ರಮೀಝಾ ನಾಸಿರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು ಎಂದು ಆಡಳಿತ ಮಂಡಳಿ ಅಧ್ಯಕ್ಷ ಬಿ. ಇಬ್ರಾಹಿಂ, ಅಬ್ದುಲ್ ಅಜೀಜ್ ಎಂ, ಶೆರಿನ್ ಬಾನು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





