ಜೋಕಟ್ಟೆಯಲ್ಲಿ ವ್ಯಾಪಕ ಹಾರುಬೂದಿ: ಆಕ್ರೋಶಗೊಂಡ ಜನತೆ
ಮಂಗಳೂರು,ಜ.25: ಎಂ.ಆರ್.ಪಿ.ಎಲ್ ನ ಕೋಕ್ ಸಲ್ಪರ್ ಘಟಕದಿಂದ ಕೋಕ್ ಹಾರುಬೂದಿ ವ್ಯಾಪಕವಾಗಿ ಸುರಿದ ಪರಿಣಾಮ ಜೋಕಟ್ಟೆಯಲ್ಲಿ ಇಂದು ರಾತ್ರಿ ಜನರು ಗುಂಪು ಸೇರಿ ಉದ್ರಿಕ್ತ ವಾತವರಣ ನಿರ್ಮಾಣವಾಯಿತು.
ಕಳೆದ ಎರಡು ದಿನಗಳಿಂದ ಜೋಕಟ್ಟೆ ಗ್ರಾಮದ ಹಲವೆಡೆ ಹಾರೂ ಬೂದಿ ವ್ಯಾಪಕವಾಗಿ ಸುರಿಯುತ್ತಿದ್ದ ಪರಿಣಾಮ ಜನರು ತೀವೃ ತೊಂದರೆಯನ್ನನುಭವಿಸುತ್ತಿದ್ದು ಇದನ್ನು ಪ್ರತಿಭಟಿಸಲು ಜನರು ರಾತ್ರಿ ಗುಂಪುಗುಂಪಾಗಿ ಒಟ್ಟುಸೇರಿದರು.
ಹಾರುಬೂದಿ ವ್ಯಾಪಕವಾಗಿ ಸುರಿಯುತ್ತಿದ್ದರು ಎಂಆರ್‌ಪಿಎಲ್ ಅಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಭೇಟಿ ನೀಡದೆ ಇರುವುದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸ್ಥಳಕ್ಕೆ ಪಣಂಬೂರು ಇನ್ಸ್‌ಪೆಕ್ಟರ್ ಭೇಟಿ ನೀಡಿದ ಸಂದರ್ಭದಲ್ಲಿ ಆಕ್ರೋಶಿತ ನಾಗರಿಕರು ಅವರಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
Next Story





