ಪುರುಷರ ಸಿಂಗಲ್ಸ್: ವಾವ್ರಿಂಕಗೆ ರಾವೊನಿಕ್ ಶಾಕ್

ಆಸ್ಟ್ರೇಲಿಯನ್ ಓಪನ್
ಮೆಲ್ಬೋರ್ನ್, ಜ.25: ಕೆನಡಾದ ಮಿಲೊಸ್ ರಾವೊನಿಕ್ ಸೋಮವಾರ ನಡೆದ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 2014ರ ಚಾಂಪಿಯನ್ ಸ್ವಿಸ್‌ನ ಸ್ಟಾನ್ ವಾವ್ರಿಂಕಗೆ ಶಾಕ್ ನೀಡಿದರು.
ವಿಶ್ವದ ನಂ.4ನೆ ಆಟಗಾರ ವಾವ್ರಿಂಕ ವಿರುದ್ಧ 6-4, 6-3, 5-7, 4-6, 6-3 ಸೆಟ್‌ಗಳ ಅಂತರದಿಂದ ಮಣಿಸಿದ ರಾವೊನಿಕ್ ಸತತ ಎರಡನೆ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
13ನೆ ಶ್ರೇಯಾಂಕದ ಆಟಗಾರ ರಾವೊನಿಕ್ ಇತ್ತೀಚೆಗೆ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್‌ರನ್ನು ಸೋಲಿಸಿ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟ್ರೋಫಿಯನ್ನು ಗೆದ್ದುಕೊಂಡಿದ್ದರು. ರಾವೊನಿಕ್ ಫ್ರೆಂಚ್ ಚಾಂಪಿಯನ್ ವಾವ್ರಿಂಕ ವಿರುದ್ಧ ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಮೊದಲ ಗೆಲುವು ಇದಾಗಿದೆ. ಇದೀಗ ಮಹತ್ವದ ಗೆಲುವು ಸಾಧಿಸಿರುವ ರಾವೊನಿಕ್ ಮುಂದಿನ ಸುತ್ತಿನಲ್ಲಿ ಗಾಯೆಲ್ ಮಾನ್‌ಫಿಲ್ಸ್‌ರನ್ನು ಎದುರಿಸಲಿದ್ದಾರೆ.
ಮರ್ರೆ, ಫೆರರ್‌ಗೆ ಜಯ: ಬ್ರಿಟನ್‌ನ ಆ್ಯಂಡಿ ಮರ್ರೆ ಹಾಗೂ ಸ್ಪೇನ್‌ನ ಡೇವಿಡ್ ಫೆರರ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 2ನೆ ಶ್ರೇಯಾಂಕದ ಮರ್ರೆ ಆಸ್ಟ್ರೇಲಿಯದ ನಂ.17ನೆ ಆಟಗಾರ ಬೆರ್ನಾರ್ಡ್ ಟಾಮಿಕ್‌ರನ್ನು 6-4, 6-4, 7-6(4) ಸೆಟ್‌ಗಳ ಅಂತರದಿಂದ ಮಣಿಸಿದರು. ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಾಲ್ಕು ಬಾರಿ ರನ್ನರ್ ಅಪ್ ಪ್ರಶಸ್ತಿ ಜಯಿಸಿರುವ ಮರ್ರೆ ಮುಂದಿನ ಸುತ್ತಿನಲ್ಲಿ ಡೇವಿಡ್ ಫೆರರ್‌ರನ್ನು ಎದುರಿಸಲಿದ್ದಾರೆ.
8ನೆ ಶ್ರೇಯಾಂಕದ ಫೆರರ್ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಲಂಬೂ ಆಟಗಾರ ಜಾನ್ ಇಸ್ನೆರ್‌ರನ್ನು 6-4, 6-4, 7-5 ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ಆಸ್ಟ್ರೇಲಿಯನ್ ಓಪನ್‌ನಲ್ಲಿ 6ನೆ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ವಿಕ್ಟೋರಿಯಾ ಅಝರೆಂಕಾ ಕ್ವಾರ್ಟರ್ ಫೈನಲ್‌ಗೆ:
ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ನೇರ ಸೆಟ್‌ಗಳಿಂದ ಗೆಲುವು ಸಾಧಿಸಿರುವ ಎರಡು ಬಾರಿಯ ಚಾಂಪಿಯನ್ ವಿಕ್ಟೋರಿಯಾ ಅಝರೆಂಕಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ವಿಶ್ವದ ಮಾಜಿ ನಂ.1 ಆಟಗಾರ್ತಿ ಅಝರೆಂಕಾ ಝೆಕ್‌ನ ಬಾರ್ಬರ ಸ್ಟ್ರೈಕೊವಾರನ್ನು 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಅಂತಿಮ 8ರ ಸುತ್ತಿನಲ್ಲಿ ಏಳನೆ ಶ್ರೇಯಾಂಕಿತೆ ಆ್ಯಂಜೆಲಿಕ್ ಕೆರ್ಬರ್‌ರನ್ನು ಎದುರಿಸಲಿದ್ದಾರೆ.
ಮೆಲ್ಬೋರ್ನ್ ಪಾರ್ಕ್ ಅಝರೆಂಕಾ ಪಾಲಿಗೆ ಅದೃಷ್ಟದ ಮೈದಾನವಾಗಿದೆ. ಇಲ್ಲಿ ಅವರು 2012 ಹಾಗೂ 2013ರಲ್ಲಿ ಚಾಂಪಿಯನ್ ಆಗಿದ್ದರು.







