ಸಾನಿಯಾ, ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್‌ಗೆ
ಆಸ್ಟ್ರೇಲಿಯನ್ ಓಪನ್:
ಮೆಲ್ಬೋರ್ನ್, ಜ.25: ಭಾರತದ ಟೆನಿಸ್ ಸ್ಟಾರ್‌ಗಳಾದ ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ರಮವಾಗಿ ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಅಜೇಯ ಗೆಲುವಿನ ಓಟ ಮುಂದುವರಿಸಿರುವ ಸಾನಿಯಾ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಒಂದು ಗಂಟೆ, 21 ನಿಮಿಷಗಳ ಕಾಲ ಮಹಿಳೆಯರ ಡಬಲ್ಸ್‌ನಲ್ಲಿ ರಶ್ಯದ ಸ್ವೆತ್ಲಾನಾ ಕುಝ್ನೆಸೇವಾ ಹಾಗೂ ಇಟಲಿಯ ರಾಬರ್ಟ ವಿನ್ಸಿ ಅವರನ್ನು 6-1, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ವಿಶ್ವ ನಂ.1 ಡಬಲ್ಸ್ ಜೋಡಿ ಸಾನಿಯಾ-ಹಿಂಗಿಸ್ ಮುಂದಿನ ಸುತ್ತಿನಲ್ಲಿ 12ನೆ ಶ್ರೇಯಾಂಕದ ಅಮೆರಿಕ-ಜರ್ಮನಿಯ ಅನ್ನಾ-ಲೆನಾ ಗ್ರಾಯೆನ್‌ಫೀಲ್ಡ್ ಹಾಗೂ ಕೊಕೊ ವ್ಯಾಂಡೆವೇಘ್‌ರನ್ನು ಎದುರಿಸಲಿದ್ದಾರೆ.
ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ ಬೋಪಣ್ಣ ಹಾಗೂ ಚೈನೀಸ್ ತೈಪೆಯ ಯಂಗ್-ಜಾನ್ ಚಾನ್ ಝೆಕ್‌ನ ಆ್ಯಂಡ್ರಿಯ ಹ್ಲಾವಾಕೊವಾ ಹಾಗೂ ಪೊಲೆಂಡ್‌ನ ಲುಕಾಸ್ ಕುಬಾಟ್‌ರನ್ನು 4-6, 6-3(10-6) ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.





