ಆತೂರು ಅಫ್ವಾ ಫ್ಯಾಮಿಲಿಯ ಕಂದಮ್ಮಗಳಿಗೆ ಉಳ್ಳಾಲದ ಕೋಡಿಯಲ್ಲಿ ಚಿಣ್ಣದ ಪದಕ
ಮಂಗಳೂರು,ಜ.25: ಸಯ್ಯಿದ್ ಮದನಿ ದರ್ಗಾ ಅನದ ಉಳ್ಳಾಲ ಕೋಡಿಯ ಹಿದಾಯತುಸ್ಸಿಬ್‌ಯಾನ್ ಮದ್ರಸದ ಮಕ್ಕಳ ಮೀಲಾದ್ ಕಾರ್ಯಕ್ರಮ ಕೋಡಿ ಬದ್ರಿಯಾ ಮಸೀದಿ ಖತೀಬರಾದ ಅಬ್ದುಲ್ ಮಜೀದ್ ಮದನಿ ಉಸ್ತಾದರ ದುವಾದೊಂದಿಗೆ ಮಸೀದಿಯ ಅಧ್ಯಕ್ಷರಾದ ಅಶ್ರ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಕೋಡಿ ಮುಹ್ಯಿದ್ದೀನ್ ಮಸೀದಿ ಇಮಾಮರಾದ ಅಶ್ರ್ ಅಹ್ಸನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರವಾದಿ ಮುಹಮ್ಮದ್ ಮುಸ್ತ (ಸ.ಅ) ರವರ ಮದ್‌ಹ್ ಕೀರ್ತನೆಗಳನ್ನು ವಿವಿಧ ಭಾಷೆಗಳಲ್ಲಿ ಭಾಷಣ ಹಾಡುಗಳ ಮೂಲಕ ಮದ್ರಸದ ಮಕ್ಕಳು ತಿಳಿಸಿದರು. 35 ವರ್ಷಗಳಿಂದ ಕೋಡಿ ಮಸೀದಿಯ ಖತೀಬರಾಗಿಯೂ ಮದ್ರಸದ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿರುವ ಅಪಾರ ಶಿಷ್ಯ ವೃಂದವನ್ನು ಹೊಂದಿರುವ ಅಬ್ದುಲ್ ಮಜೀದ್ ಮದನಿ ಉಸ್ತಾದಿಗೆ ತನ್ನ ಶಿಷ್ಯಂದಿರ ಸಂಘಟನೆಯು ಸನ್ಮಾನಿಸಿ ದ್ವಿಚಕ್ರ ವಾಹನವನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಿದರು. ಕೋಡಿ ಸೋಲಾರ್ ಸಮಿತಿಯು ಏಳನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಉಳ್ಳಾಲ ರೇಂಜ್ ಮಟ್ಟದಲ್ಲಿ ದ್ವಿತೀಯ ಹಾಗೂ ಸದ್ರಿ ಮದ್ರಸದಲ್ಲಿ ಪ್ರಥಮ ಸ್ಥಾನ ಪಡೆದ ಆತೂರು ಅ್ವಾ ್ಯಾಮಿಲಿಯ ಕಂದಮ್ಮಗಳಾದ ಆಮಿನ ರುೈದಾಳಿಗೆ ಚಿಣ್ಣದ ಪದಕವನ್ನು ನೀಡಿ ಕಲಿಕೆಗೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಯು. ಎಸ್.ಹಂಝ ಹಾಜಿ, ಉಳ್ಳಾಲ ಮುತ್ತಿಸ್ ಸುಲೈಮಾನ್ ಸಖಾಫಿ, ಕೋಡಿ ಮಸೀದಿಯ ಪ್ರ.ಕಾರ್ಯದರ್ಶಿ ಮುಹಮ್ಮದಾಕ, ಾರುಖ್, ರಫೀಖ್, ಉಮರಬ್ಬ ಸೇರಿದಂತೆ ಸರ್ವ ಸಮಿತಿ ಸದಸ್ಯರುಗಳು ಹಿದಾಯತುಸ್ಸಿಬ್‌ಯಾನ್ ಮದ್ರಸದ ಮುಖ್ಯೋಪಾಧ್ಯಾಯರಾದ ಶಂಸುದ್ದೀನ್ ಮದನಿ , ಅಧ್ಯಾಪಕರುಗಳು ಉಪಸ್ಥಿತರಿದ್ದರು.





