ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ‘ಆಪರೇಶನ್ ಸ್ಮೆಲ್ -2’ ಕಾರ್ಯಾಗಾರ
ಉಡುಪಿ ಜ.25: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ‘ಆಪರೇಶನ್ ಸ್ಮೆಲ್ -2’ ಒಂದು ದಿನದ ಕಾರ್ಯಾಗಾರವನ್ನು ಸೋಮವಾರ ಆಯೋಜಿಸಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅೀಕ್ಷಕ ಕೆ. ಅಣ್ಣಾಮಲೈ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಯ ಅಕಾರಿಯವರೊಂದಿಗೆ ಕಾಣೆ ಯಾದ ಮಕ್ಕಳ ಪತ್ತೆ, ಸರಕಾರಿ/ಸರಕಾರೇತರ ಸಂಸ್ಥೆಯಲ್ಲಿರುವ ಹಾಗೂ ಭಿಕ್ಷಾಟನೆ ಮಾಡುತ್ತಿರುವ ಅನಾಥ ಮಕ್ಕಳ ಹೆತ್ತವರನ್ನು ಪತ್ತೆ ಮಾಡುವ, ಬಾಲಕಾರ್ಮಿಕರು/ಮಕ್ಕಳ ಕಳ್ಳ ಸಾಗಾಣಿಕೆ, ಮಕ್ಕಳ ಕಾನೂನು, ರಕ್ಷಣೆ, ಪೋಷಣೆ, ಪುನರ್ವಸತಿ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅೀಕ್ಷಕ ಸಂತೋಷ್ ಕುಮಾರ್, ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಟಿ.ಆರ್.ಜೈಶಂಕರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣ, ಮಂಗಳೂರು ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಕಾರ್ಮಿಕ ಅಕಾರಿ ಜ್ಞಾನೇಶ್, ಜಿಲ್ಲಾ ಮಕ್ಕಳ ರಕ್ಷಣಾಕಾರಿ ಆರ್.ಶೇಷಪ್ಪ, ಕೆದೂರು ಸ್ಪೂರ್ತಿ ಸಂಸ್ಥೆಯ ಕೇಶವ ಕೊಟೇಶ್ವರ, ಕುಂದಾಪುರ ನಮ್ಮ ಭೂಮಿಯ ಸಹ ನಿರ್ದೇಶಕರಾದ ಶಿವಾನಂದ ಶೆಟ್ಟಿ ಹಾಗೂ ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸುರೇಶ್ ಭಟ್, ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಉಪನಿರೀಕ್ಷಕರು ಉಪಸ್ಥಿತರಿದ್ದರು. ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು.







