ದಲಿತ ವಿದ್ಯಾರ್ಥಿ ಆತ್ಮಹತ್ಯೆ: ದಸಂಸ ಖಂಡನೆ
ಪುತ್ತೂರು, ಜ.25: ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧಕ ದಲಿತ ವಿದ್ಯಾರ್ಥಿ ಆತ್ಮಹತ್ಯೆಯನ್ನು ಶುಕ್ರವಾರ ಹಿರೇಬಂಡಾಡಿ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ದಸಂಸ(ಭೀಮವಾದ) ಸಭೆಯಲ್ಲಿ ಖಂಡಿಸಲಾಯಿತು. ದಸಂಸ ಜಿಲ್ಲಾ ಮುಖಂಡ ಶೇಷಪ್ಪನೆಕ್ಕಿಲು ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧಕ ದಲಿತ ವಿದ್ಯಾರ್ಥಿ ಆತ್ಮಹತ್ಯೆಯನ್ನು ಖಂಡಿಸಲಾಯಿತು ಹಾಗೂ ತಪ್ಪಿತಸ್ಥರ ಮೇಲೆ ಕೇಂದ್ರ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಮುಂಬರುವ ತಾಪಂ, ಜಿಪಂ ಚುನಾವಣೆಯ ಹಿನ್ನ್ನೆಲೆಯಲ್ಲಿ ಮತದಾನದ ಅಗತ್ಯತೆಯ ಕುರಿತು ಅರಿವು ನೀಡಲಾಯಿತು. ಸುದ್ದಿ ವೇದಿಕೆಯ ವತಿಯಿಂದ ನಡೆಯುತ್ತಿರುವ ಬಲಾತ್ಕಾರದ ಬಂದ್ ಮತ್ತು ಕೋಮು ಗಲಭೆ ವಿರೋಧಿ ಆಂದೋಲನಕ್ಕೆ ಪೂರ್ಣ ಬೆಂಬಲ ನೀಡಲು ತೀರ್ಮಾನಿಸಲಾಯಿತು. ದಲಿತ ಸಂಘಟನೆಯ ಮುಖಂಡರಾದ ಮೋನಪ್ಪ ದ್ರಾವಿಡ್, ಮನೋಜ್ ಎಂ ಮತ್ತು ಸಂಜೀವ ಎಳಿಯ ಉಪಸ್ಥಿತರಿದ್ದರು. ವಸಂತ ಸ್ವಾಗತಿಸಿದರು. ದಿನೇಶ್ ಕೋಟ್ರಾಸ್ ವಂದಿಸಿದರು.
Next Story





