ಭ್ರಷ್ಟಾಚಾರ ತಾಣಗಾಳಾಗಿರುವ ಜಿಲ್ಲೆಯ ಸರಕಾರಿ ಕಚೆೇರಿಗಳು ಎಚ್.ಡಿ. ರೇವಣ್ಣ ಆತಂಕ

ಹಾಸನ, ಜ.25: ಜಿಲ್ಲೆಯ ಸರಕಾರಿ ಕಚೇರಿಗಳೆಲ್ಲಾ ಭ್ರಷ್ಟಾಚಾರದ ತಾಣಗಾಳಾಗಿ ಮಾರ್ಪಟ್ಟು, ಸಾರ್ವಜನಿಕರು ಕಚೆೇರಿಗೆ ಹೋಗಲು ಹೆದರುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆತಂಕವ್ಯಕ್ತಪಡಿಸಿದ್ದಾರೆ.
ನಗರದ ಕೆ.ಆರ್. ಪುರಂನಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆ, ವಿದ್ಯುತ್ ಇಲಾಖೆ, ರಿಜಿಸ್ಟರ್ ಕಚೆೇರಿ ಸೇರಿದಂತೆ ವಿವಿಧ ಸರಕಾರಿ ಕಚೆೇರಿಗಳಿಗೆ ಜನರು ತಮ್ಮ ಅಗತ್ಯ ಕೆಲಸಕ್ಕೆಂದು ಹೋಗಬೇಕಾದರೆ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಂತಿಷ್ಟು ಶೇಕಡಾ ಲೆಕ್ಕಚಾರದಲ್ಲಿ ವ್ಯವಹಾರ ಮಾಡಲು ಹಣ ಇಟ್ಟುಕೊಳ್ಳಬೇಕಾಗಿದೆ ಎಂದು ಆರೋಪಿಸಿದರು.
ಯಾವುದೇ ಕೆಲಸ ಆಗಿರಲಿ ಗುತ್ತಿಗೆ ಪಡೆಯಲು ಹಾಗೂ ಕಡತ ವಿಲೇವಾರಿ ಮಾಡಬೇಕಾದರೆ ಮೊದಲೇ ಹಣ ನಿಗದಿ ಮಾಡುವ ಮೂಲಕ ಇರುವ ಅನೇಕ ಸರಕಾರಿ ಕಚೆೇರಿಗಳು ಭ್ರಷ್ಟಚಾರದ ತಾಣಗಳಾಗಿ ಮಾರ್ಪಟ್ಟಿವೆ ಎಂದು ಆಕ್ರೋಶವ್ಯಕ್ತಪಡಿಸಿದರು. ಜಿಲ್ಲಾಡಳಿತದಲ್ಲಿ ಈ ಬಗ್ಗೆ ಜನಪ್ರತಿನಿಧಿಗಳಾಗಲಿ ಇತರರು ಯಾರೇ ಬಂದು ಮಾಹಿತಿ ಕೇಳಿದರೆ ಸಮರ್ಪಕ ಮಾಹಿತಿ ನೀಡದೆ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೂರು ನೀಡಿದವರ ಕಡತಗಳು ಮಾತ್ರ ಮುಂದೆ ಸಾಗುತ್ತವೆೆ. ಹಾಸನ ಜಿಲ್ಲೆಯಲ್ಲಿ ಜಿಲ್ಲಾಡಳಿತ ಯಂತ್ರವು ಸಂಪೂರ್ಣ ನಿಷ್ಕ್ರಿಯಯವಾಗಿರುವುದರಿಂದ ಬಡ ಜನತೆ ಹಾಗೂ ಸಾಮಾನ್ಯ ಜನರು ಸಮಸ್ಯೆ ಎದುರಿಸಬೇಕಾಗಿದೆ. ಭಷ್ಟಾಚಾರದ ನಿಯಂತ್ರಣವಾಗದೆ ಅನೇಕ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಮುಂದೆ ಬಾರದೆ ಹೆದರಿಕೆಯಿಂದ ಸುಮ್ಮನಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿ ರಾಜ್ಯದ ಜನತೆ ಪಕ್ಷವನ್ನು ಬೆಂಬಲಿಸುವುದರೊಂದಿಗೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವುದು ಖಂಡಿತ ಎಂದು ಭವಿಷ್ಯ ನುಡಿದ ಅವರು, ಫೆಬ್ರವರಿಯಲ್ಲಿ ನಡೆಯುವ ಜಿಪಂ-ತಾಪಂ ಚುನಾವಣೆಗೆ ಜೆಡಿಎಸ್ ಪಕ್ಷವೂ ಸಂಪೂರ್ಣ ತಯಾರಾಗಿದೆ. ಪಕ್ಷದಿಂದ ನಾಯಕರ ಸಭೆ ಕರೆದು ಚರ್ಚೆ ಮಾಡಿದ ಬಳಿಕ ಟಿಕೆಟ್ ನೀಡಲಾಗುವುದು. ಜನತೆ ನಮ್ಮ ಪಕ್ಷವನ್ನು ಇದುವರೆಗೂ ಕೈಹಿಡಿದು ನಡೆಸಿದ್ದಾರೆ. ಇತರೆ ಪಕ್ಷದವರಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಪರೋಕ್ಷವಾಗಿ ಸಚಿವ ಎ. ಮಂಜು ವಿರುದ್ಧ ಮಾತಿನ ವಾಗ್ದಾಳಿ ನಡೆಸಿದರು.





