ಪ್ರಜಾಪ್ರಭುತ್ವಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲುಯುವಕರಿಗೆ ಕರೆ ಮೈಸೂರು: ಮತದಾರರ ದಿನಾಚರಣೆ

ಮೈಸೂರು,ಜ.25: ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ಯೂರಬೇಕಾದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಪಾಲ್ಗೊ ಳ್ಳುವಿಕೆ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ 18 ವರ್ಷ ಪೂರೈಸಿದ ಪ್ರತಿಯೊಬ್ಬ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ, ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಕರೆ ನೀಡಿದ್ದಾರೆ.
ಮೈಸೂರಿನ ನಟರಾಜ ಮಹಿಳಾ ವಸತಿ ಪ್ರಥಮ ದಜೆ ಕಾಲೇಜಿನಲ್ಲಿ ಸೋಮವಾರ ಯುವ ಭಾರತ್ ಸಂಘಟ ನೆಯ ವತಿಯಿಂದ ಆಯೋಜಿಸಿ ದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಭಾಷಣದಲ್ಲಿ ಅವರು ಮಾತನಾಡಿದರು.
ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂವಿಧಾನವೇ ಆಧಾರ. ಸಂವಿಧಾನದಲ್ಲಿ ಭಾರತೀಯ ರಿಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳಲ್ಲಿ ಮತದಾನ ಅತ್ಯಂತ ಮಹತ್ವದ್ದು. ಆದರೆ, ವಿದ್ಯಾವಂತರೇ ಮತದಾನದ ಪ್ರಕ್ರಿಯೆಯಿಂದ ದೂರ ಉಳಿಯುತ್ತಿರುವುದು ದುರದೃ ಷ್ಟಕರ. ಪ್ರಜಾಪ್ರಭುತ್ವದ ಮೇಲೆ ಅವಿದ್ಯಾ ವಂತರು, ಗ್ರಾಮೀಣ ಜನರಿಗೆ ಇರುವ ಗೌರವ ವಿದ್ಯಾವಂತರ-ಪ್ರಜ್ಞಾವಂತ ಮತದಾ ರರಿಗೆ ಇಲ್ಲದಾಗಿದೆ. ನಿಮ್ಮದೊಂದು ಓಟು ಇಡೀ ದೇಶದ ಭವಿಷ್ಯವನ್ನೇ ಬದಲಿಸುವ ಶಕ್ತಿ ಹೊಂದಿದೆ. ಪವಿತ್ರ ಮತದಾನವನ್ನು ಹಣ, ಆಮಿಷಕ್ಕೆ ಮಾರಬೇಡಿ ಎಂದು ಕಿವಿಮಾತು ಹೇಳಿದರು.
ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸು ಮಾತನಾಡಿ, ದೇಶಕ್ಕೆ ಸಂವಿಧಾನ ಹೇಗೆ ಬಂತು, ಏತಕ್ಕಾಗಿ ಬಂದಿದೆ ಎಂಬುವುದನ್ನು ಯುವಕರು ಮನಗಾಣಬೇಕಿದೆ. ಎಂದರು. ವೇದಿಕೆಯಲ್ಲಿ ವಿಪ್ರ ಸಮಾಜದ ಮುಖಂಡ ಕೆ.ರಘುರಾಂ, ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಶಾರದಾ, ಯುವ ಭಾರತ್ ಸಂಚಾಲಕ ಜೋಗಿ ಮಂಜು, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.





