ಕನಕಪುರ: ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ
ಕನಕಪುರ, ಜ.15: ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಕೆ.ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಎನ್.ಸುರೇಶ್ ಹಾಗೂ ಕೆ.ಆರ್.ಉಮಾಶಂಕರ್, ಪ್ರಧಾನ ಕಾರ್ಯದರ್ಶಿಯಾಗಿ ಶಿವನಹಳ್ಳಿ ಶಿವಲಿಂಗಯ್ಯ, ಕಾರ್ಯದರ್ಶಿಯಾಗಿ ಜಿ.ಪ್ರವೀಣ್, ಖಜಾಂಚಿಯಾಗಿ ಟಿ.ಸಿ.ವೆಂಕಟೇಶ್, ನಿರ್ದೇಶಕರಾಗಿ ಕೆ.ಎಸ್.ರಾಮಚಂದ್ರ, ಬಿ.ಎಂ. ಅರವಿಂದ್, ಮುಹಮ್ಮದ್ ಲಿಯಾಖತ್ ಅಲಿ, ಜಿ.ಎಂ.ಪ್ರಾಣೇಶ್, ಕೆ.ವಿ.ಮನು ಅವರು ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಎಸ್.ಕೆ.ಜಗದೀಶ್ ಮಾತನಾಡಿ, ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಪತ್ರಕರ್ತರ ಸಂಘ ಕಾರ್ಯನಿರ್ವಹಿಸುತ್ತಾ ಬಂದಿದೆ. ಕಳೆದ 2 ವರ್ಷಗಳಿಂದ ಸಂಘವು ತಟಸ್ಥವಾಗಿತ್ತು. ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಎಸ್.ಶಿವಲಿಂಗಯ್ಯರವರ ನೇತೃತ್ವದಲ್ಲಿ ಪುನಃ ಸಭೆಸೇರಿ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಪದಾಧಿಕಾರಿಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ ಎಂದರು.
ಪತ್ರಕರ್ತರ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತ ಸದಸ್ಯರಿಗೆ ಹಲವಾರು ಸಮಸ್ಯೆಗಳಿವೆ. ಹಿರಿಯ ಪತ್ರಕರ್ತರ ಮಾರ್ಗದರ್ಶನದಲ್ಲಿ ಹೆಲ್ತ್‌ಕಾರ್ಡ್, ಜೀವವಿಮೆ, ಬಸ್‌ಪಾಸ್ ಕೊಡಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.





