ಮೊಬೈಲ್ ಸುಲಿಗೆ: ಆರೋಪಿಗಳ ದಸ್ತಗಿರಿ
ಬೆಂಗಳೂರು, ಜ. 25: ದುಬಾರಿ ಬೆಲೆಯ ಮೊಬೈಲ್‌ಫೋನ್ ದೋಚಿದ ಪ್ರಕರಣ ಸಂಬಂಧ ಇಲ್ಲಿನ ಆಡುಗೋಡಿ ಠಾಣಾ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ವಿಲ್ಸನ್ ಗಾರ್ಡನ್ ನಿವಾಸಿ ಅರುಣ (24), ಮುನಿಯಪ್ಪ ಯಾನೆ ಸತ್ಯ (21) ಹಾಗೂ ಚಂದ್ರಶೇಖರ್ ಯಾನೆ ಚೇತನ್ (26) ಎಂದು ಗುರುತಿಸಲಾಗಿದೆ.
ಆರೋಪಿಗಳು ಜ.14ರಂದು ಇಲ್ಲಿನ ಬಿಜಿ ರಸ್ತೆಯ, ಆರ್‌ಡಿ ಲೇಔಟ್‌ನಲ್ಲಿ ಮಧ್ಯರಾತ್ರಿ 1ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಅವರ ಬಳಿಯಿದ್ದ ದುಬಾರಿ ಬೆಲೆಯ ಮೊಬೈಲ್ ಫೋನ್ ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಆಡುಗೋಡಿ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
Next Story