ಖೋಟಾನೋಟು ದಂಧೆ ಆರೋಪಿಯ ಸೆರೆ
ಬೆಂಗಳೂರು, ಜು. 25: ಖೋಟಾನೋಟು ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಇಲ್ಲಿನ ಬಸವನಗುಡಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಖೋಟಾನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಜಮ್ಮು-ಕಾಶ್ಮೀರದ ಶ್ರೀನಗರ ಮೂಲದ ಶೌಕತ್ ಅಹ್ಮದ್ (36) ಎಂದು ಗುರುತಿಸಲಾಗಿದೆ.
ಆರೋಪಿಯು ಜ.23ರಂದು ಬಾಂಗ್ಲಾ ದೇಶದಲ್ಲಿ ಮುದ್ರಿತವಾಗಿವೆ ಎಂದು ಹೇಳಲಾದ ಖೋಟಾನೋಟುಗಳನ್ನು ಭಾರತಕ್ಕೆ ತಂದು ಚಲಾವಣೆ ಮಾಡಲು ಪ್ರಯತ್ನ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ 1ಸಾವಿರ ರೂ.ಬೆಲೆಯ 200 ಮತ್ತು 500 ರೂ.ಬೆಲೆಯ 200ನೋಟುಗಳು ಸೇರಿದಂತೆ 3ಲಕ್ಷ ರೂ.ಮೊತ್ತದ ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬಸವನಗುಡಿ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
Next Story





