ಶಿಕ್ಷಕರ ನೇಮಕಾತಿ ಪಟ್ಟಿ ಪ್ರಕಟ: ಕೌನ್ಸೆಲಿಂಗ್
ಮಂಗಳೂರು, ಜ.25: ಕಳೆದ (2014-15) ಸಾಲಿನ ಸರಕಾರಿ ಪ್ರಾಥ ಮಿಕ ಶಾಲಾ ಸಹ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಡಿಡಿಪಿಐ ಕಚೇರಿ ಯಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.
ಜ.27ರಂದು 6ರಿಂದ 8ನೆ ತರಗತಿ ವರೆಗಿನ ಸಾಮಾನ್ಯ ಕನ್ನಡ ಹಾಗೂ ಜ.28ರಂದು ಆಂಗ್ಲ ಭಾಷಾ ಶಿಕ್ಷಕರ ನೇಮಕಾತಿ ಕೌನ್ಸೆಲಿಂಗ್ ಬೆಳಗ್ಗೆ 10ಕ್ಕೆ ನಗರದ ಗಾಂಧಿನಗರದಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆಸಲಾ ಗುವುದು. ಆಯ್ಕೆಯಾಗಿರುವ ಅಭ್ಯರ್ಥಿ ಗಳು 5 ಭಾವಚಿತ್ರ, ಎಲ್ಲ ಮೂಲ ದಾಖಲೆಗಳನ್ನು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಕೌನ್ಸ್ಸೆಲಿಂಗ್ ಸಮಯದಲ್ಲಿ ಕಡ್ಡಾಯವಾಗಿ ಸಲ್ಲಿಸು ವಂತೆ ಡಿಡಿಪಿಐ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story