ನೀವು ಸರಕಾರ ರಚಿಸುವುದಿಲ್ಲವಾದರೆ ವಿಧಾನ ಸಭೆ ವಿಸರ್ಜಿಸಿ : ಫಾರೂಕ್ ಅಬ್ದುಲ್ಲಾ ಸಲಹೆ

ಜಮ್ಮು: ಪಿಡಿಪಿ ಹಾಗೂ ಬಿಜೆಪಿ ಸರಕಾರ ರಚಿಸುವುದಿಲ್ಲವಾದರೆ, ಜನರು ನೀಡಿರುವ ಹೊಣೆಗಾರಿಕೆಯನ್ನು ಪೂರ್ತಿಗೊಳಿಸುವುದಿಲ್ಲವಾದರೆ ವಿಧಾನ ಸಭೆ ವಿಸರ್ಜನೆಗೆ ದಾರಿ ಮಾಡಿಕೊಡಲಿ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಪರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಇಂದು ಹೇಳಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಅವರು ಸರಕಾರ ರಚಿಸುವ ಬಗ್ಗೆ ಪಿಡಿಪಿ- ಬಿಜೆಪಿ ಇನ್ನು ನಿರ್ಧರಿಸದಿರುವವುದು ರಾಜ್ಯದ ಜನಹಿತಕ್ಕೆ ವಿರೋಧಿಯಾಗಿದೆ.
ಜಮ್ಮು ಮುತ್ತು ಕಾಶ್ಮೀರದಂತಹ ಸೂಕ್ಷ್ಮ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚು ಸಮಯ ಮುಂದುವರಿಯುವುದು ಶುಭ ಸೂಚಕವಲ್ಲ. ಒಂದು ವೇಳೆ ಪಿಡಿಪಿ-ಬಿಜೆಪಿ ತನ್ನ ಜವಾಬ್ದಾರಿಕೆಯನ್ನು ನಿರ್ವಹಿಸುವುದಿಲ್ಲವೆಂದಾದರೆ ಚುನಾವಣೆಯ ಹೊರತು ಬೇರೆ ದಾರಿಯಿಲ್ಲ ಎಂದ ಅವರು ಜನರು ಪಿಡಿಪಿ-ಬಿಜೆಪಿಗೆ ಜನಾದೇಶ ನೀಡಿದ್ದಾರೆ ಅವರು ಮಾತ್ರ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದೂ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
Next Story





