ವಾಣಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಗಣರಾಜ್ಯೋತ್ಸವ

ಬೆಳ್ತಂಗಡಿ : ವೈವಿಧ್ಯತೆಗಳ ಆಗರವಾಗಿರುವ ಭಾರತಕ್ಕೆ ತನ್ನ ಎಲ್ಲಾ ವೈವಿಧ್ಯತೆಗಳನ್ನೂ ಒಳಗೊಂಡಿರುವ ಶ್ರೇಷ್ಠ ಸಂವಿಧಾನವೊಂದು ದೊರಕಿದೆ.ಪ್ರಜಾಪ್ರಭುತ್ವದ ತತ್ವ ಸಂದೇಶಗಳು, ನಮ್ಮ ಸಂವಿಧಾನವು ಮುಂದಿಡುವ ಸಮಾನತೆಯ ಸಹಬಾಳ್ವೆಯ ಸಂದೇಶ ಕಡತಗಳಿಗೆ ಸೀಮಿತಾಗದೆ ಎಲ್ಲರಿಗೂ ತಲುಪುವಂತಾಗಬೇಕು ಜನರು ್ ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಪ್ರೀತಿಸಿ ಉಳಿಸುವ ಕಾರ್ಯ ಮಾಡಬೇಕು ಎಂದು ಪತ್ರಕರ್ತ ಶಿಬಿ ಧರ್ಮಸ್ಥಳ ಹೇಳಿದ್ದಾರೆ.
ಅವರು ಮಂಗಳವಾರ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ 67ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿ ಭಾರತದ ಸಂವಿಧಾನಸ್ವತಂತ್ರವಾಗಿ ಚಿಂತಿಸುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಸ್ವಾತಂತ್ರ್ಯವನ್ನು ಪ್ರತಿಯೊಬ್ಬರಿಗೂ ನೀಡಿದೆ ಇದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಶೋಷಣೆಗೊಗಾದವರ ಪರ ಧ್ವನಿ ಮೊಳಗುವಂತಾಗಬೇಕು.
ಪ್ರತಿಯೊಬ್ಬರಿಗೂ ಪ್ರಶ್ನಿಸುವ ಮನೋಭಾವ ಬಂದಾಗ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ನಿಜವಾದ ಬೆಲೆ ಬರುತ್ತದೆ. ದೇಶ ಪ್ರೇಮದ ಜೊತೆ ಸಂವಿಧಾನದ ಬಗ್ಗೆ ಮಕ್ಕಳಲ್ಲಿ ಜ್ಞಾನ ತುಂಬಿಸುವ ಕಾರ್ಯವಾಗಬೇಕು ಎಂದರು.
ಶಾಸಕ ಕೆ. ವಸಂತ ಬಂಗೇರ, ತಾ. ಪಂ. ಅಧ್ಯಕ್ಷೆ ಜಯಂತಿಪಾಲೆದು, ನ. ಪಂ. ಅಧ್ಯಕ್ಷೆ ನಳಿನಿ ವಿಶ್ವನಾಥ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಎಂ. ಆರ್, ಜೈನ್, ಸರ್ಕಲ್ ಇನ್ಸ್‌ಪೆಕ್ಟರ್ ಲಿಂಗಪ್ಪ ಪೂಜಾರಿ, ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಎಂ. ಆರ್, ಜೈನ್, ನಿವೃತ್ತ ಶಿಕ್ಷಕ ಗಂಗಾಧರ ಇವರನ್ನು ಶಾಸಕ ಬಂಗೇರ ಸನ್ಮಾನಿಸಿದರು. ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಸೂರ್ಯನಾರಾಯಣ ಭಟ್ ಸ್ವಾಗತಿಸಿ, ಪತ್ರಕರ್ತ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.







