ಇನ್ನು ಪಾಸ್‌ಪೋರ್ಟ್ ಮಾಡಿಸುವುದು ತುಂಬಾ ಸುಲಭ !

ಹೊಸದಿಲ್ಲಿ: ಈಗ ನಿಮಗೆ ಪಾಸ್‌ಪೋರ್ಟ್ ಮಾಡಿಸುವುದು ಕಷ್ಟವಿಲ್ಲ. ಪೊಲೀಸ್ ವೆರಿಫಿಕೇಶನ್‌ಗಾಗಿ ಕಾದು ಕುಳಿತುಕೊಳ್ಳಬೇಕಿಲ್ಲ. ಅದು ಇಲ್ಲದೆಯೂ ಪಾಸ್‌ಪೋರ್ಟ್ ಸಿಗಲಿದೆ. ವೆರಿಫಿಕೇಶನ್ ನಂತರ ನಡೆಯಲಿದೆ.
ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ನಿಮ್ಮಲ್ಲಿ ಪಾನ್‌ಕಾರ್ಡ್, ವೋಟರ್ ಐಡಿ, ರೇಶನ್ ಕಾರ್ಡ್‌ನ ಕಾಪಿ ಮತ್ತು ಯಾವುದೇ ರೀತಿಯ ಕ್ರಿಮಿನಲ್ ದಾಖಲೆ ಹೊಂದಿಲ್ಲ ಎಂದು ಅಫಿದಾವಿತ್ ನೀಡಿದರೆ ಪಾಸ್‌ಪೋರ್ಟ್ ನೀಡಲಾಗುವುದು. ಪಾಸ್‌ಪೋರ್ಟ್ ದೊರೆತ ಮೇಲೆ ಪೊಲೀಸ್ ವೆರಿಫಿಕೇಶನ್ ನಡೆಯುತ್ತದೆ. ಜೊತೆಗೆ ಪಾಸ್‌ಪೋರ್ಟ್ ಸರ್ವಿಸ್‌ನ 5 ಅವೆಲೆಬಲ್ ದಿನಗಳಲ್ಲಿ ಯಾವುದೇ ಒಂದು ದಿನದಲ್ಲಿ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಬಹುದಾಗಿದೆ.
Next Story





