ನೂರುಲ್ ಹುದಾ ಸಮೂಹ ಶಿಕ್ಷಣ ಸಂಸ್ಥೆ - ಕಾಟಿಪಳ್ಳದಲ್ಲಿ ಗಣರಾಜ್ಯೋತ್ಸವ

ಕಾಟಿಪಳ್ಳ: ಇಲ್ಲಿನ ನೂರುಲ್ ಹುದಾ ಸಮೂಹ ಶಿಕ್ಷಣ ಸಂಸ್ಥೆ ಯಡಿ ಗಣರಾಜ್ಯೋತ್ಸವ ವನ್ನು ಸಂಭ್ರಮದಿಂದ ಇಂದು ಆಚರಿಸಲಾಯ್ತು.
ಸಂಸ್ಥೆಯ ಕಾರ್ಯದರ್ಶಿ ಜಿ.ಮೊಹಮ್ಮದ್ ಧ್ವಜಾರೋಹಣ ಗ್ಯೆದರು.ಮುಖ್ಯ ಶಿಕ್ಷಕಿ ಸುನೀತಾ ಪ್ಯೆ ಸ್ವಾಗತಿಸಿದರು. ಸಂಚಾಲಕ ಪಿ.ಎ.ಇಲ್ಯಾಸ್ ರವರು ಗಣರಾಜ್ಯೋತ್ಸವದ ಹಿನ್ನೆಲೆ ಹಾಗೂ ಸಂವಿಧಾನ ಕರ್ತ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ದೂರದ್ರಷ್ಟಿತ್ವದ ಬಗ್ಗೆ ಹೇಳಿದರು. ವಿದ್ಯಾರ್ಥಿನಿ ಫಾತಿಮ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುಲ್ಯೆಮಾನ್, ಸಂಘದ ಕೋಶಾಧಿಕಾರಿ ಪಿಎಎಂ ಶರೀಫ್,ಪೋಷಕ ಪ್ರತಿನಿಧಿ ಝರೀನ ಮೊಹಿಯುದ್ದೀನ್,ಶಿಕ್ಷಕ ವ್ರಂದ ಹಾಜರಿದ್ದರು.
ಗಣರಾಜ್ಯೋತ್ಸವದ ಬಗೆಗಿನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯ್ತು.

Next Story





