Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಉಳ್ಳಾಲದ ಅಬ್ಬಕ್ಕನ ಪರ ಹೋರಾಡಿದವರು...

ಉಳ್ಳಾಲದ ಅಬ್ಬಕ್ಕನ ಪರ ಹೋರಾಡಿದವರು ಮಾಪಿಳ್ಳೆಗಳು ಮತ್ತು ಮೊಗವೀರರು

ಶ್ರೀನಿವಾಸ ಕಾರ್ಕಳಶ್ರೀನಿವಾಸ ಕಾರ್ಕಳ26 Jan 2016 5:37 PM IST
share
ಉಳ್ಳಾಲದ ಅಬ್ಬಕ್ಕನ ಪರ ಹೋರಾಡಿದವರು ಮಾಪಿಳ್ಳೆಗಳು ಮತ್ತು ಮೊಗವೀರರು

ಧಾರ್ಮಿಕ ಸಾಮರಸ್ಯ ತುಳುನಾಡಿಗೆ ಹೊಸ ವಿಷಯವೇನಲ್ಲ. ನೂರಾರು ವರ್‍ಷಗಳ ಹಿಂದಿನಿಂದಲೂ ಇದು ಧರ್ಮಸಮನ್ವಯದ ನಾಡು. ಹಾಗೆಯೇ ಮತಧರ್ಮ, ಸಂಸ್ಕೃತಿ, ಭಾಷೆ ಮೊದಲಾದ ದೃಷ್ಟಿಯಿಂದ ವೈವಿಧ್ಯದ ನಾಡು, ವೈಶಿಷ್ಟ್ಯದ ನಾಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಹೀಗೆ ನಾನಾ ಮತಧರ್ಮಗಳಿಗೆ ಸೇರಿದ ಜನ ಇಲ್ಲಿ ಕಾಲ ಕಾಲಾಂತರದಿಂದ ಸಾಮರಸ್ಯದಿಂದ ಬದುಕಿದ್ದಾರೆ. ತುಳು, ಕನ್ನಡ, ಬ್ಯಾರಿ, ಕೊಂಕಣಿ, ಉರ್ದು, ಶಿವಳ್ಳಿ, ಹವ್ಯಕ, ಮರಾಠಿ, ನವಾಯತ ಹೀಗೆ ನಾನಾ ಭಾಷೆಗಳು ಇಲ್ಲಿ ಜತೆಯಾಗಿಯೇ ಬದುಕಿವೆ.  ಅತ್ಯಂತ ವಿಶಿಷ್ಟವಾದ ಕರಾವಳಿಯ ಈ ಪ್ರದೇಶವನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವಾಣಿಜ್ಯಾತ್ಮಕವಾಗಿ ಕಟ್ಟಿಬೆಳೆಸುವುದಕ್ಕೆ ಈ ಎಲ್ಲ ಸಮುದಾಯದವರೂ ತಮ್ಮ ಪಾಲಿನ ಕೊಡುಗೆ ನೀಡಿದ್ದಾರೆ.

ಈ ಪ್ರದೇಶವನ್ನು ವಿದೇಶೀ ಆಕ್ರಮಣಗಳಿಂದ ರಕ್ಷಿಸುವ ಪ್ರಶ್ನೆ ಬಂದಾಗಲೂ ಇಲ್ಲಿನ ಜನ ಮತಧರ್ಮ ದ  ಭೇದವಿಲ್ಲದೆ ಹೆಗಲಿಗೆ ಹೆಗಲು ನೀಡಿ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಇದಕ್ಕೆ ಚರಿತ್ರೆಯಲ್ಲಿ ಅಪಾರ ನಿದರ್ಶನಗಳು ಲಭ್ಯವಿದ್ದು ಅಂಥ ಒಂದು ನಿದರ್ಶನವೆಂದರೆ ಮಂಗಳೂರಿನ ಬಳಿಯ ಉಳ್ಳಾಲದ ರಾಣಿ ಅಬ್ಬಕ್ಕನ ಸಾಹಸದ ಚರಿತ್ರೆ.

ಸುಮಾರು 400 ವರ್ಷಗಳ ಹಿಂದೆ ಅಂದರೆ 16 ನೆ ಶತಮಾನದ ಕೊನೆ ಭಾಗದಲ್ಲಿ ಉಳ್ಳಾಲದ ರಾಣಿಯಾಗಿದ್ದ ಅಬ್ಬಕ್ಕ ವಸಾಹತುಶಾಹಿ ಶಕ್ತಿಯ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರಳಾದವಳು. ಕ್ರಿಸ್ತಪೂರ್‍ವ ಕಾಲದಿಂದಲೂ ಕರಾವಳಿಯ ಈ ಪ್ರದೇಶ ಪಶ್ಚಿಮದ ದೇಶಗಳೊಂದಿಗೆ ವ್ಯಾಪಾರ ವಹೀವಾಟುಗಳಿಗೆ ಹೆಸರುವಾಸಿಯಾಗಿದ್ದು,  ವಾಣಿಜ್ಯ ವ್ಯಾಪಾರದ ದೃಷ್ಟಿಯಿಂದ ತುಂಬ ಆಯಕಟ್ಟಿನ ಜಾಗದಲ್ಲಿದ್ದ ಕಾರಣ ಈ ಪ್ರದೇಶದ ಮೇಲೆ ಧಾಳಿಕೋರರಿಗೆ ಸದಾ ಕಣ್ಣಿರುತ್ತಿತ್ತು. ಇದೇ ಹಿನ್ನೆಲೆಯಲ್ಲಿ ಪೋರ್ಚುಗೀಸರು ಕರಾವಳಿಯ ಈ ಉಳ್ಳಾಲ ಪ್ರದೇಶವನ್ನು ಕೈವಶಮಾಡಿಕೊಳ್ಳಲು ಶತಾಯಗತಾಯ ಯತ್ನಿಸುತ್ತಲೇ ಇದ್ದರು. ಆದರೆ ಇದಕ್ಕೆ ಸುಲಭದಲ್ಲಿ ಅವಕಾಶ ಕೊಡದ ಅಬ್ಬಕ್ಕ ಕಡಲಿನಲ್ಲಿ ಪೋರ್ಚುಗೀಸ್ ನೌಕಾ ಪಡೆಗಳ ಮೇಲಣ ಅಸಾಧಾರಣ ಧಾಳಿಯೊಂದಿಗೆ 1567 -80 ರ ನಡುವೆ ಪೋರ್ಚುಗೀಸ್ ಪಡೆಗಳಿಗೆ ನೀಡಿದ ದಿಟ್ಟ ಪ್ರತಿರೋಧ, ಅವರ ಸೈನ್ಯವನ್ನು ಕಾಡಿಸಿದ ಪರಿ ಚಾರಿತ್ರಿಕವಾದುದು. ಇದೇ ಕಾರಣಕ್ಕೆ ವಿದೇಶದಲ್ಲಿಯೂ ಆಕೆಯ ಸಾಹಸ ಹೆಸರಾಗಿತ್ತು. ಇಟಲಿಯ ಪ್ರವಾಸಿ ಪಿಯೆತ್ರೋ ಆ ಕಾಲದಲ್ಲಿ ಉಳ್ಳಾಲಕ್ಕೆ ಭೇಟಿ ನೀಡಿ ಅಂದಿನ ಉಳ್ಳಾಲದ ಬಗ್ಗೆ ತನ್ನ ಪುಸ್ತಕದಲ್ಲಿ  ವಿವರವಾಗಿ ಬರೆದಿದ್ದಾನೆ.

ಅಂದ ಹಾಗೆ ಈ ಚಾರಿತ್ರಿಕ ಹೋರಾಟದಲ್ಲಿ ಅಬ್ಬಕ್ಕನ ಸೇನೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು, ಪ್ರಾಣದ ಹಂಗು ತೊರೆದು ಹೋರಾಡಿದವರು ಮಾಪಿಳ್ಳೆಗಳು ಮತ್ತು ಮೊಗವೀರರು.  ಇದು ಈ ನೆಲದ ಮೂಲ ಸಂಸ್ಕೃತಿ. ನಾವು ಇಲ್ಲಿನವರು ನೀವು ಹೊರಗಿನವರು ಎಂದು ಮಾತನಾಡುವ ಮತಾಂಧರು ಇದನ್ನು ಮೊದಲಾಗಿ ಇಲ್ಲಿನ ಚರಿತ್ರೆಯನ್ನು ತಿಳಿದುಕೊಳ್ಳುವ ಅಗತ್ಯವಿದೆ.

share
ಶ್ರೀನಿವಾಸ ಕಾರ್ಕಳ
ಶ್ರೀನಿವಾಸ ಕಾರ್ಕಳ
Next Story
X