ಸುಳ್ಯ : ಬೈಕ್ ಪಲ್ಟಿ - ಸವಾರರಿಗೆ ಗಾಯ
ಸುಳ್ಯ: ಬೈಕ್‌ಗೆ ದನಗಳು ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಅಡ್ಕಾರ್ ಮಸೀದಿ ಬಳಿ ನಡೆದಿದೆ.
ಜಯನಗರ ನಿವಾಸಿಗಳಾದ ನವೀನ್ ಮಚಾದೋ ಹಾಗೂ ಉಮೇಶ್‌ರವರು ಬೈಕಿನಲ್ಲಿ ಅಡ್ಕಾರ್‌ಗೆ ಕೆಲಸಕ್ಕೆ ಹೋಗುತ್ತಿದ್ದರು. ಅಡ್ಕಾರ್ ಮಸೀದಿ ಬಳಿ ತಲುಪಿದಾಗ ದನಗಳು ಬೈಕ್‌ಗೆ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಯಿತು. ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದು ದನಗಳ ಮಾಲಕರಾದ ಗಣೇಶ್‌ರವರು ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು.
ಪಾದಚಾರಿಗೆ ಗಾಯ:
ಸುಳ್ಯದ ಜೂನಿಯರ್ ಕಾಲೇಜು ಬಳಿ ಪಾದಚಾರಿಯೋರ್ವರಿಗೆ ಬೈಕ್ ಡಿಕ್ಕಿಯಾದ ಘಟನೆ ನಡೆದಿದೆ. ಜಟ್ಟಿಪಳ್ಳ ನಿವಾಸಿ ಸತ್ಯ ಎಂಬವರು ಜೂನಿಯರ್ ಕಾಲೇಜು ಬಳಿ ನಡೆದುಕೊಂಡು ಹೋಗುವಾಗ ಸುಳ್ಯ ಪೇಟೆಯಿಂದ ಹೋಗುತ್ತಿದ್ದ ಶಿಕ್ಷಕ ಸೀತಾರಾಮ ಎಂಬವರ ಬೈಕ್ ಡಿಕ್ಕಿ ಹೊಡೆಯಿತು.
Next Story





